ಆನಂದದಿಂದ ಬದುಕಬೇಕು ಎಂದರೆ ಹೆಚ್ಚಿನವರಿಗೆ ‘ಸಂಪತ್ತಿದ್ದರೆ ಮಾತ್ರ ಅದು ಸಾಧ್ಯ’ ಎಂಬ ಭಾವನೆ. ಬೇಕೆನಿಸಿದ್ದನ್ನು ಕೊಳ್ಳುವಷ್ಟು ಹಣವಿದ್ದರೆ, ಸುಖ-ಭೋಗಗಳ ಸಾಧನಗಳನ್ನು ಖರೀದಿಸುವ ಸಾಮಥ್ರ್ಯವಿದ್ದರೆ ಮಾತ್ರವೇ ಆನಂದದಿಂದ ಬದುಕಬಹುದು, ಅದಿಲ್ಲದಿದ್ದರೆ ಸಂತೋಷದ ಬದುಕನ್ನು ನಡೆಸುವುದು ಅಸಾಧ್ಯ ಎಂದು ಅನೇಕರು ಹೇಳುವರು. ಹಾಗಾದರೆ ನಿಜಕ್ಕೂ ಬದುಕಿನ ಸಂತೋಚ ಇರುವುದಾದರೂ ಎಲ್ಲಿ? ಸುಖಭೋಗಗಳ ಸಾಮಗ್ರಿಗಳನ್ನು ಖರೀದಿಸುವ ಸಾಮಥ್ರ್ಯದಲ್ಲೇ? ನಾವು ಖರೀದಿಸುವ ಅಂತಹ ವಸ್ತುಗಳಲ್ಲೇ? ಅಥವಾ ನಮ್ಮ ಮನಸ್ಸಿನ ಮೇಲೆ ನಾವು ನಿಯಂತ್ರಣವನ್ನು ಹೊಂದುವುದರಲ್ಲೇ? ನಿಜಕ್ಕಾದರೆ ತನ್ನ ಮೇಲೆ ನಿಯಂತ್ರಣವನ್ನು ಹೊಂದುವವನೇ ಸ್ವತಂತ್ರ ವ್ಯಕ್ತಿ. ಮನಸ್ಸಿನ ಆಸೆಗಳನ್ನು ಪೂರೈಸಲು ಆರಂಭಿಸಿದರೆ ಅದಕ್ಕೆ ಕೊನೆ ಮೊದಲುಂಟೆ? ಆಸೆಗಳಿಗೆ ಬಲಿ ಬೀಳಲು ತೊಡಗಿದರೆ ಮನಸ್ಸು ಬಾಹ್ಯ ಆಕರ್ಷಣೆಗಳಿಗೆ ಗುರಿಯಾಗಿ ಗುಲಾಮನಾಗುವುದಲ್ಲದೆ ಇನ್ನೇನು? ಪರಿಣಾಮವಾಗಿ ಮನಸ್ಸಿನ ಸ್ಥಿರತೆ ನಾಶವಾಗಿ ಬಾಳುಗೋಳಿನ ಸಾಗರದಲ್ಲಿ ಮುಳುಗುವ ದುರಂತಕ್ಕೆ ಈಡಾಗುವುದಿಲ್ಲವೇ? ಬದುಕಿನಲ್ಲಿ ನಮ್ಮ ಬಲುದೊಡ್ಡ ಸಮಸ್ಯೆ ಎಂದರೆ ಕೆಡುಕನ್ನು ಕೂಡ ನಾವು ಒಳಿತಿನಿಂದಲೇ ಎದುರಿಸಿರಿ. ಆಗ ನಿಮ್ಮ ಶತ್ರುವಾಗಿರುವವನು ಕೂಡ ನಿಮ್ಮ ಆಪ್ತಮಿತ್ರನಾಗಿ ಮಾರ್ಪಡುವನು.’ ಬದುಕಿನಲ್ಲಿ ಕೆಡುಕನ್ನು ಒಳಿತಿನಿಂದಲೇ ಜಯಿಸುವ ಮನೋಬಲ ಸಿದ್ಧಿಸಬೇಕಾದರೆ ಮನಸ್ಸನ್ನು ಸಂಪೂರ್ಣವಾಗಿ ಹಿಡಿತದಲ್ಲಿ ಇಟ್ಟುಕೊಳ್ಳವ ಕಲೆಯನ್ನು ಕರಗತಮಾಡಿಕೊಳ್ಳುವುದು ಅಗತ್ಯ.