Home » ಹೃದಯದ ಭಾಷೆ
 

ಹೃದಯದ ಭಾಷೆ

by Kundapur Xpress
Spread the love

ಖ್ಯಾತ ಪಾಶ್ಚಾತ್ಯ ಚಿಂತಕ ಕಂಬಲರ್ಂಜ್ ಒಂದೆಡೆ ಹೀಗೆ ಹೇಳುತ್ತಾರೆ: ತುಕ್ಕು ಹಿಡಿದು ಹೋಗುವುದಕ್ಕಿಂತ ಸವೆದು ಹೋಗುವುದೇ ಲೇಸು ! ನಮ್ಮ ಸಾರ್ಥಕ ಜೀವನ ಹೇಗಿರಬೇಕು ಎಂಬುದಕ್ಕೆ ಮಾರ್ಗದರ್ಶಿಯಂತಿರುವ ಈ ಮಾತು ಮನನೀಯವಾಗಿದೆ. ಪರೋಪಕಾರಕ್ಕಾಗಿ, ಜನಹಿತ ಸೇವೆಗಾಗಿ ಮೀಸಲಿಡಬೇಕಾಗಿರುವ ದೇಹವನ್ನು ಸ್ವಾರ್ಥಪರತೆಗೆ ಮೀಸಲಿಡುವುದು ಮನುಷ್ಯನ ಮೂಲ ಸ್ವಭಾವ. ಅನುಭವದಿಂದ ಬದುಕು ಪಕ್ವವಾದಂತೆ ಮನುಷ್ಯನಿಗೆ ‘ತಾನು ಮಾತ್ರ ಬದುಕುವುದಲ್ಲ; ತನ್ನಂತೆ ಇತರರೂ ಬದುಕಬೇಕು’ ಎಂಬ ದೃಷ್ಟಿ ವೈಶಾಲ್ಯ, ಹೃದಯ ವೈಶಾಲ್ಯ ಪ್ರಾಪ್ತವಾಗುತ್ತದೆ. ಇಂತಹ ಮಾರ್ಪಾಡು ಎಲ್ಲರಲ್ಲೂ ಆದೀತು ಎಂದಲ್ಲ. ಸಂಸ್ಕøತಿಯನ್ನು ಮೈಗೂಡಿಸಿಕೊಂಡಂತೆ ಬಹುತೇಕ ಮಂದಿಯಲ್ಲಿ ಆಗಬೇಕಾದ ಮಾರ್ಪಾಡು ಇದು! ದೇಹವನ್ನು ಪರೋಪಕಾರಕ್ಕಾಗಿ ಬಳಸಬೇಕಿದ್ದರೆ ದೇಹದ ಮೇಲೆ ಮನಸ್ಸು ಮತ್ತು ಹೃದಯದ ಸಂಸ್ಕಾರ ಉಂಟಾಗಬೇಕು. ದೇಹವು ಮೂಲಭೂತವಾಗಿ ಮೃಗೀಯ ಪ್ರವೃತ್ತಿಗೆ ಸುಲಭವಾಗಿ ಪಕ್ಕಾಗುವ ಉಪಕರಣ. ಆದರೆ ದೇಹವನ್ನು ನಿಷ್ಠಾವಂತ ಸೇವಕನಂತೆ ದುಡಿಸಿಕೊಳ್ಳಬೇಕಾದರೆ ಅದಕ್ಕೆ ಹೃದಯದ ಭಾಷೆಯನ್ನು ಕಲಿಸಬೇಕು. ಪ್ರತಿಯೋರ್ವರಲ್ಲಿ ಇರುವ ಹೃದಯವನ್ನು ಅರ್ಥಮಾಡಿಕೊಳ್ಳಲು ಇನ್ನೊಂದು ಹೃದಯಕ್ಕೆ ಮಾತ್ರ ಸಾಧ್ಯ ಎಂಬ ಗೌತಮ ಬುದ್ಧನ ಮಾತಿನಲ್ಲಿ ಹೃದಯದ ಭಾಷೆಯಲ್ಲಿ ಅಂತರ್ಗತವಾಗಿರುವ ದಯೆ, ತ್ಯಾಗದ ಭಾವ ವ್ಯಕ್ತವಾಗುತ್ತದೆ. ಅಂತೆಯೇ ದೇಹದ ಶಕ್ತಿ ಸಾಮಥ್ರ್ಯವನ್ನು ಸತ್ಕರ್ಮಗಳಿಗೆ ವಿನಿಯೋಗಿಸಲು ಮನಸ್ಸು ಮತ್ತು ಹೃದಯ ದಾರಿ ದೀವಿಗೆಯಂತೆ ಕೆಲಸ ಮಾಡುವುದರಲ್ಲಿ ಸಂದೇಹವಿಲ್ಲ. ‘ಪ್ರೀತಿಯ ಮಾತು ಉಕ್ಕಿನ ಬಾಗಿಲನ್ನೂ ತೆರೆಸಬಲ್ಲದು’ ಎಂಬ ಜಾನ್ ಕೀಟ್ಸ್‍ನ ಮಾತಿನಲ್ಲಿ ಒಂದು ಹೃದಯ ಇನ್ನೊಂದು ಹೃದಯದೊಡನೆ ನಡೆಸುವ ಸಂವಹನ ಪರಿಣಾಮಕಾರಿ ಎಂಬುದು ಸುಸ್ಪಷ್ಟ

   

Related Articles

error: Content is protected !!