Home » ಒಳ್ಳೆಯ ಜೀವನ
 

ಒಳ್ಳೆಯ ಜೀವನ

by Kundapur Xpress
Spread the love

ಖ್ಯಾತ ಆಂಗ್ಲ ನಾಟಕಕಾರ ವಿಲಿಯಂ ಶೇಕ್ಸ್‍ಪಿಯರ್ ತನ್ನ ಸಾಹಿತ್ಯದಲ್ಲಿ ಒಂದೆಡೆ ಹೇಳುತ್ತಾನೆ: ಚೆನ್ನಾಗಿ ಕೆಲಸ ಮಾಡಿದ ದಿನ ಚೆನ್ನಾಗಿ ನಿದ್ರೆ ಬರುವಂತೆ ಒಳ್ಳೆಯ ಜೀವನ ನಡೆಸಿದವರಿಗೆ ಸುಖವಾದ ಮರಣವೂ ಬರುತ್ತದೆ! ಚೆನ್ನಾಗಿ ಕೆಲಸ ಮಾಡುವುದು ಮತ್ತು ಚೆನ್ನಾಗಿ ಜೀವನ ನಡೆಸುವುದು ಎಂದರೆ ಏನು ಎಂಬ ಬಗ್ಗೆ ನಾವು ಸ್ವಲ್ಪ ಸೂಕ್ಷ್ಮವಾದ ಚಿಂತನೆ ನಡೆಸಬೇಕು. ಚೆನ್ನಾಗಿ ಕೆಲಸ ಮಾಡುವುದೆಂದರೆ ನಮ್ಮ ಪಾಲಿನ ಕೆಲಸವನ್ನು ನಾವು ಕೌಶಲ ದಿಂದ ಮತ್ತು ಬದ್ಧತೆಯಿಂದ ನಿರ್ವಹಿಸುವುದೇ ಆಗಿದೆ. ಹೀಗೆ ಚೆನ್ನಾಗಿ ಕೆಲಸ ಮಾಡುವುದೇ ಗುರಿಯಾದಾಗ ಅದರ ಪ್ರತಿಫಲದ ಬಗ್ಗೆ ನಾವು ಚಿಂತಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಪ್ರತಿಫಲವೇ ಮುಖ್ಯವೆಂದು ತಿಳಿದಾಗ ಮಾಡಬೇಕಾದ ಕೆಲಸದಲ್ಲಿ ತನ್ಮಯರಾಗಲು ನಮಗೆ ಸಾಧ್ಯವಾಗುವುದಿಲ್ಲ. ಕೆಲಸವನ್ನು ಹೇಗಾದರೂ ಮಾಡಿ ಬೇಗನೆ ಮುಗಿಸಬೇಕೆಂಬ ಧೋರಣೆಯನ್ನು ಹೊಂದಿದಾಗ ಮನಸ್ಸು ಕೌಶಲದಿಂದ ವಿಮುಖವಾಗುತ್ತದೆ. ಪರಿಣಾಮವಾಗಿ ಮಾಡಿದ ಕೆಲಸದಿಂದ ಮನಸ್ಸಿಗೆ ಒಂದಿಷ್ಟೂ ತೃಪ್ತಿ ಸಿಗುವುದಿಲ್ಲ ಮಾತ್ರವಲ್ಲ ಮಾಡಿದ ಕೆಲಸದಲ್ಲಿ ತಪ್ಪುಗಳೇ ಕಂಡು ಬರುವುವು. ಕೌಶಲದಿಂದ ಕೆಲಸ ಮಾಡಿದಾಗ ಸಿಗುವ ತೃಪ್ತಿ, ಸಂತೋಷಕ್ಕೆ ಎಷ್ಟು ದೊಡ್ಡ ಬೆಲೆಯನ್ನೂ ಕಟ್ಟಲಾಗದು. ಒಳ್ಳೆಯ ಜೀವನವನ್ನು ನಡೆಸುವ ವಿಚಾರವೂ ಅಷ್ಟೇ ಪರಿಶುದ್ಧ, ನಿಸ್ವಾರ್ಥ ಬದುಕೇ ಒಳ್ಳೆಯ ಜೀವನ. ಇಂದ್ರಿಯಗಳು ಮತ್ತು ಮನಸ್ಸನ್ನು ಮೀರಿ ಹೋಗುವ ಮೂಲಕ ಎಲ್ಲ ಬಗೆಯ ಐಹಿಕ ಬಂಧನಗಳಿಂದ ಪಾರಾಗುವಲ್ಲೇ ಸಚ್ಚಿದಾನಂದವು ಪ್ರಾಪ್ತವಾಗುವುದು. ಚೆನ್ನಾಗಿ ಮಾಡಿದ ಕೆಲಸದಿಂದ ದೇಹಕ್ಕೆ ಮತ್ತು ಮನಸ್ಸಿಗೆ ಸಿಗುವ ಸಂತೃಪ್ತಿ ಎಷ್ಟು ಪರಿಶುದ್ಧವೋ ಉತ್ತಮವಾಗಿ ನಡೆಸಿದ ಜೀವನದಿಂದ ಪ್ರಾಪ್ತವಾಗುವ ಸುಖ ಮರಣವೂ ಅಷ್ಟೇ ಮಹತ್ವದ್ದಾಗಿದೆ. ಏಕೆಂದರೆ ನಿಸ್ವಾರ್ಥ ಬದುಕಿನಲ್ಲಿ ಪರಹಿತವೇ ಮುಖ್ಯವಾಗಿದ್ದು ಪ್ರತಿಯೋರ್ವರಲ್ಲೂ ದೇವರನ್ನು ಕಾಣುವ ಹಂಬಲವೇ ಅಂತರ್ಗತವಾಗಿರುತ್ತದ

   

Related Articles

error: Content is protected !!