Home » ಅಕ್ಷಯ ಆನಂದ
 

ಅಕ್ಷಯ ಆನಂದ

by Kundapur Xpress
Spread the love

ಪಂಚತಂತ್ರದಲ್ಲಿ ಒಂದು ಮಾತಿದೆ ಪಾಪಗಳಿಗೆಲ್ಲ ಲೋಭವೇ ಮೂಲ. ವ್ಯಾಧಿಗಳಿಗೆಲ್ಲ ರಸಗಳೇ ಮೂಲ. ದುಃಖಗಳಿಗೆಲ್ಲ ಸ್ನೇಹ ಸಂಬಂಧವೇ ಮೂಲ. ನಮ್ಮ ಐಹಿಕ ಬದುಕಿನ ಸಕಲ ದುಃಖಗಳ ಮೂಲವು ಎಲ್ಲಿದೆ ಎಂಬ ಶೋಧನೆಗೆ ಈ ಮಾತು ಬಹಳ ಪೂರಕವಾಗಿದೆ. ಲೋಭದ ಹಂಗಿಲ್ಲದಿದ್ದರೆ ಯಾರೂ ಪಾಪಗಳಿಗೆ ತೊಡಗುವುದಿಲ್ಲ. ಲೋಭವು ನಮ್ಮಲ್ಲಿ ಸ್ವಾರ್ಥವನ್ನೂ ಮೋಹವನ್ನೂ ಉಂಟುಮಾಡುತ್ತದೆ. ಐಹಿಕ ಜಗತ್ತನ್ನು ಅತಿಯಾದ ಸ್ವಾರ್ಥದಿಂದ ಪ್ರೀತಿಸುವಂತೆ ಮಾಡುತ್ತದೆ. ನಾನಾ ರೀತಿಯ ಅನ್ಯಾಯಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. ನಮ್ಮ ದೇಹಕ್ಕೆ ಅಂಟಿಕೊಳ್ಳುವ ರೋಗಗಳ ಮೂಲ ರಸದಲ್ಲೇ ಇದೆ. ನಮ್ಮ ನಾಲಗೆಯ ಚಪಲವೊಂದೇ ಸಾಕು ನಮ್ಮನ್ನು ರೋಗಗಳ ಉಗ್ರಾಣ ಮಾಡಲು. ಇವತ್ತು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತಿದೆ: ಶೇ35 ಮಂದಿಗೆ ಕ್ಯಾನ್ಸರ್ ಬರಲು ಆಹಾರವೇ ಕಾರಣ! ನಾಲಗೆಯ ಚಾಪಲ್ಯವನ್ನು ನಿಯಂತ್ರಿಸುವುದು ಐಹಿಕ ಬದುಕಿನ ಬಹಳ ಮುಖ್ನ ಅನೇಕ ದುಃಖಗಳ ಮೂಲ ಕಾರಣ ಸ್ನೇಹ ಸಂಬಂಧಗಳು ನಮ್ಮ ನ್ಯಾಯಾಲಯಗಳಲ್ಲಿ ಕೋಟೆಗಟ್ಟಲೆ ಸಂಖ್ಯೆಯಲ್ಲಿ ನೆನೆಗುದಿಗೆ ಬಿದ್ದಿರುವ ವ್ಯಾಜ್ಯಗಳನ್ನು ಕಂಡರೆ ಈ ಮಾತು ನಿಚ್ಚಳವಾಗುತ್ತದೆ. ಅಲ್ಲಿರುವ ಬಹುತೇಕ ಎಲ್ಲ ವ್ಯಾಜ್ಯಗಳು ಪರಿಚಿತರು ಹಾಗೂ ಸಂಬಂಧಿಕರ ನಡುವೆಯೇ ಏರ್ಪಟ್ಟಿದೆ  ಹಾಗಿರುವಾಗ ಸಾಂಸಾರಿಕ ಸುಖಭೋಗಗಳನ್ನು ಬಯಸುವ ನಮಗೆ ಕಷ್ಟ ಕಾರ್ಪಣ್ಯಗಳಿಂದಾಗುವ ದುಃಖ-ದುಮ್ಮಾನ, ರೋಗ-ರುಜಿನಗಳ ಭಯದಿಂದ ಮುಕ್ತಿಯುಂಟೇ ಆದರೆ ಗೀತೆಯಲ್ಲಿ ಶ್ರೀಕೃಷ್ಣನ ಒಂದು ಭರವಸೆಯ ಮಾತಿದೆ: ಸಾಂಸಾರಿಕ ಸುಖ ಭೋಗಗಳಿಂದ ದೊರಕುವ ಕ್ಷಣಿಕ ಆನಂದಕ್ಕಿಂತ ಶಾಶ್ವತವಾದ ಶಾಂತಿಯನ್ನು ನಾವು ಭಗವಂತನ ಧ್ಯಾನದಿಂದ ಪಡೆಯಬಹುದು. ಆ ಆನಂದವು ಅಕ್ಷಯವಾದುದಾಗಿದೆ. ಒಮ್ಮೆ ಅದನ್ನು ಪಡೆದರೆ ಮತ್ತೆ ಬೇರೆ ಯಾವುದರ ಬಯಕೆಯೂ ಉಂಟಾಗದು!

   

Related Articles

error: Content is protected !!