Home » ದೇವರ ಸ್ಮರಣೆ
 

ದೇವರ ಸ್ಮರಣೆ

by Kundapur Xpress
Spread the love

ನಾವೆಲ್ಲರೂ ದೇವರನ್ನು ಭಜಿಸುತ್ತೇವೆ ಸ್ತುತಿಸುತ್ತೇವೆ ಪೂಜೆ ಪುರಸ್ಕಾರಗಳನ್ನು ಮಾಡುತ್ತಿ ಯಾಕೆಂದು ಕೇಳಿದರೆ ಹಲವರು ದೇವರು ನಾವು ಬೇಡಿದ್ದನ್ನು ಕೊಡುತ್ತಾನೆಎಂದು ಹೇಳಿದರೆ ಹಾಗಿದ್ದರೆ ನೀವೇನು ಬೇಡಿಕೊಂಡಿರಿ ಎಂದು ಪ್ರಶ್ನಿಸಿದರೆ ಅದೆಲ್ಲ ಹೇಗೆ ಹೇಳಿಕ್ಕಾಗದೆ ? ಹೇಳಿ, ತೊಡಗಿದರೆ ಅದೊಂದು ದೊಡ್ಡ ಪಟ್ಟಿಯೇ ಆದೀತುಎಂದು ಉತ್ತರಿಸುತ್ತಾರೆ. ಸಾಮಾನ್ಯನಾ? ನಾವೆಲ್ಲರೂ ದೇವರನ್ನು ಭಜಿಸುವುದು, ಸ್ತುತಿಸುವುದು, ಪೂಜಿಸುವುದು ಐಹಿಕ ಬದುಕಿನನ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ, ದೇವರೊಂದಿಗಿನ ನಮ್ಮ ಬೇಡಿಕೆಗಳೆಲ್ಲವೂ ಮಕ್ಕ ಹಾಗೆ ಎನ್ನಲು ಅಡ್ಡಿಯಿಲ್ಲ. ಐಹಿಕ ಬದುಕಿನ ಬೇಡಿಕೆಗಳ ಪಟ್ಟಿಯನ್ನು ಇಟ್ಟುಕೊಂಡು ದೇವರ ಭಜಿಸಿದರೆ ನಾವು ದೇವರಿಗೆ ಹತ್ತಿರವಾಗುವುದಕ್ಕಿಂತ ಪ್ರಾಪಂಚಿಕ ಬದುಕಿಗೆ ಮತ್ತಷ್ಟು ಹತ್ತಿರವಾಗುತ್ತೇವೆ! ಕ್ಷಣಭಂಗುರವಾದ ಇಂದ್ರಿಯ ವಿಷಯಗಳಿಂದ ಸಿಗುವ ಸುಖವನ್ನೇ ನಿಜವಾದ ಮತ್ತು ಶಾಶ್ವತವಾದ ಸುಖವೆಂದು ಬಗೆಯುತ್ತೇವೆ. ಹೆಚ್ಚೆಚ್ಚು ಸ್ವಾರ್ಥಪರರಾಗುತ್ತೇವೆ. ಲೋಭ ಮೋಹಗಳನ್ನು ಬೆಳೆಸಿಕೊಳ್ಳುತ್ತೇವೆ ಪರಿಣಾಮವಾಗಿ ಬದುಕಿನಲ್ಲಿ ನಿರಂತರ ದುಃಖಕ್ಕೆ ಗುರಿಯಾಗುತ್ತೇವೆ. ದೇವರಲ್ಲಿ ನಮಗೆ ಇರುವ ಪ್ರೀತಿ, ವಿಶ್ವಾಸ ಹಾಗೂ ಭಕ್ತಿಯನ್ನು ನಾವು ಕೊಟ್ಟು ತೆಗೆದುಕೊಳ್ಳುವ ವ್ಯವಹಾರಕ್ಕೆ ತಿರುಗಿಸಬಾರದು. ದೇವರನ್ನೇ ಸೇರುವ ಅನುಗ್ರಹವು ದೊರಕಲೆಂದು ಸದಾ ದೇವರಲ್ಲಿ ಬೇಡಬೇಕು. ಅಂತಹ ಪ್ರಾರ್ಥನೆಯ ಫಲವಾಗಿ ಐಹಿಕ ಜಗತ್ತಿನೊಂದಿಗೆ ಅಂಟಿರುವ ನಮ್ಮ ನಂಟನ್ನು ನಿಧಾನವಾಗಿ ಕಳಚಿಕೊಳ್ಳಲು ಸಾಧ್ಯವಾಗುವುದು. ಸ್ವಾಮಿ ವಿವೇಕಾನಂದರ ಪ್ರಕಾರ ದೇವರನ್ನು ಸೇರುವುದು ನಮ್ಮ ಬಾಳಿನ ಪರಮ ಗುರಿಯಾಗಿರಬೇಕು ನಮ್ಮ ದೇಹ ಮತ್ತು ನಾವಿರುವ ಈ ಪ್ರಪಂಚವು ದೇವರನ್ನು ಸೇರಲು ನಮಗೆ ಆ ದೇವರೇ ಕರುಣಿಸಿರುವ ಉಪಕರಣಗಳು, ಈ ಉಪಕರಣಗಳನ್ನು ಸರಿಯಾಗಿ ಬಳಸುವ ಮೂಲಕ ನಾವು ದೇವರನ್ನು ಪಡೆಯಲು ಪ್ರಯತ್ನಿಸಬೇಕೇ ವಿನಾ ದೇವರನ್ನು ಬಳಸುವ ಮೂಲಕ ಈ ಪ್ರಪಂಚವನ್ನು ಆನಂದಿಸಲು ದೇಹವನ್ನು ಬಳಸಬಾರದು !

 

Related Articles

error: Content is protected !!