Home » ಸ್ವಜನ ಪಕ್ಷಪಾತ
 

ಸ್ವಜನ ಪಕ್ಷಪಾತ

by Kundapur Xpress
Spread the love
  1. ಸ್ವಜನ ಪಕ್ಷಪಾತ

ಹುಟ್ಟು-ಸಾವಿನ ಮರ್ಮವನ್ನು ಅರಿತ ಜ್ಞಾನಿಯ ಲಕ್ಷಣವನ್ನು ಅರ್ಜುನನಿಗೆ ತಿಳಿಸುವ ಕೃಷ್ಣನ ಮಾತು ನಿಜಕ್ಕೂ ಒಗಟೇ ಆಗಿದೆ. ದೇಹ ಸಂಬಂಧವಾದ ಹುಟ್ಟು-ಸಾವಿನ ಮರ್ಮವನ್ನು ಅರಿತ ಜ್ಞಾನಿಗಳು ಸತ್ತವರ ಬಗ್ಗೆಯಾಗಲೀ ಬದುಕಿರುವವರ ಬಗ್ಗೆಯಾಗಲೀ ಶೋಕ ಪಡುವುದಿಲ್ಲ ಎಂಬ ಮಾತಿನ ಗೂಡಾರ್ಥವನ್ನು ಅಷ್ಟು ಸುಲಭದಲ್ಲಿ ತಿಳಿದುಕೊಳ್ಳಲು ಸಾಧ್ಯವೇ? ಜ್ಞಾನಿಗಳು ಸತ್ತವರ ಬಗ್ಗೆ ಶೋಕಿಸುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಸತ್ತವರ ಬಗ್ಗೆ ನಾವು ಶೋಕಿಸುವುದು ಸಹಜವೇ ಆದರೂ ಎಷ್ಟು ಕಾಲ? ವ್ಯಾವಹಾರಿಕ ಬದುಕಿನಲ್ಲಿ ಮುಳುಗಿರುವವರಿಗಾಗಿಯೇ ಇಂಗ್ಲಿಷಿನಲ್ಲಿ ಒಂದು ಮಾತಿದೆ: ಟೈಮ್ ಇಸ್ ದಿ ಬೆಸ್ಟ್ ಹಿಲರ್. ನಮ್ಮೆಲ್ಲ ಮಾನಸಿಕ ವೇದನೆಗಳಿಗೆ ‘ಕಾಲ’ವೇ ದಿವ್ಯೌಷಧ! ತೀರಿಕೊಂಡ ನಮ್ಮ ಬಂಧುಮಿತ್ರರಿಗಾಗಿ ನಿಜಕ್ಕೂ ನಾವು ಶೋಕಿಸುವುದು ತತ್ಕಾಲೀನ ಅವಧಿಗೆ ಮಾತ್ರ. ಆನಂತರ ಅವರ ಅಗಲುವಿಕೆಯ ನೋವು ಕ್ರಮೇಣ ನಮ್ಮಲ್ಲಿ ಕಡಿಮೆಯಾಗುತ್ತದೆ. ಇದು ಸತ್ತವರ ಕುರಿತು ನಮ್ಮ ನಿಲುವು! ಆದರೆ ಕೃಷ್ಣನ ಮಾತಿನಲ್ಲಿ ನಿಜವಾದ ಜ್ಞಾನಿಗಳು ಬದುಕಿರುವವರ ಬಗ್ಗೆಯೂ ಶೋಕಿಸುವುದಿಲ್ಲ! ಹಾಗೆಂದರೇನು? ಕೃಷ್ಣನು ಬೋದಿಸುವ ಬದುಕಿನ ಸ್ಥಿತಪ್ರಜ್ಞೆಯ ಗೂಡಾರ್ಥ ಇಲ್ಲೆ ಅಡಗಿದೆ. ಬದುಕಿನ ನಮ್ಮೆಲ್ಲ ದುಃಖ-ದುಮ್ಮಾನಗಳಿಗೆ ಮೂಲ ಕಾರಣ ನಮ್ಮೊಳಗೆ ಮನೆ ಮಾಡಿರುವ ಸ್ವಜನ ಮಮಕಾರವಲ್ಲದೇ ಬೇರೇನೂ ಅಲ್ಲ. ಅರ್ಜುನನೊಳಗೂ ಇದ್ದದ್ದು ಅದೇ ಮಮಕಾರ. ಕ್ಷತ್ರಿಯ ಧರ್ಮಪರಿಪಾಲನೆಗೆ ಅಡ್ಡಿ ಬಂದದ್ದು ಕೂಡ ಇದೇ. ಈ ಮಮಕಾರವೇ ನಮ್ಮನ್ನು ಅಂಧರನ್ನಾಗಿ ಮಾಡುತ್ತದೆ. ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಮೂಲ ಹೇತುವೇ ಈ ಮಮಕಾರ! 

   

Related Articles

error: Content is protected !!