Home » ದೇವರ ಒಲುಮೆ
 

ದೇವರ ಒಲುಮೆ

by Kundapur Xpress
Spread the love
  1. ದೇವರ ಒಲುಮೆ:

ದೇವರ ಪ್ರೀತ್ಯರ್ಥವಾಗಿ ನಾವು ಏನನ್ನು ಅರ್ಪಿಸಿದರೆ ಆತನು ನಮ್ಮ ಬೇಡಿಕೆಯನ್ನು ಮನ್ನಿಸುತ್ತಾನೆ? ಈ ಪ್ರಶ್ನೆ ಯಾವತ್ತೂ ನಮ್ಮನ್ನು ಕಾಡುತ್ತಿರುತ್ತದೆ. ‘ಉಳ್ಳವರು ಶಿವಾಲಯವ ಮಾಡುವರಯ್ಯಾ’ ಎಂಬ ಸಿರಿವಂತರು ದೇವರನ್ನು ಒಲಿಸಿಕೊಳ್ಳಲು ಹೂಡುವ ತಂತ್ರೋಪಾಯವನ್ನು ಬಯಲಿಗೆಳೆಯುತ್ತದೆ. ಹಣವಂತರು ದೇವರನನು ಒಲಿಸಿಕೊಳ್ಳಲು ದೇವಾಲಯವನ್ನೇ ನಿರ್ಮಿಸುತ್ತಾರೆ; ಸಮಾಜದೆದುರು ತಮ್ ಐಶ್ವರ್ಯದ ಬಲವನ್ನು ಮೆರೆದು ದೇವರಿಗಾಗಿ ತಾವು ಮಾಡಿದ ಮಹತ್ಕಾರ್ಯಕ್ಕಾಗಿ ಎಲ್ಲರೂ ತಮ್ಮನ್ನು ಕೊಂಡಾಡಬೇಕೆಂದು ಬಯಸುತ್ತಾರೆ ಎಂಬ ತಾತ್ಪರ್ಯ ಈ ಮಾತಿನಲ್ಲಿದೆ. ಹಾಗಿದ್ದರೆ ಹಣವಿಲ್ಲದ ಬಡವರ ಗತಿಯೇನು? ದೇವರು ಅವರಿಗೆ ಒಲಿಯುವ ಸಂಭವ ಇಲ್ಲವೇ? ಬಡವರು ದೇವರನ್ನು ಒಲಿಸಿಕೊಳ್ಳಲು ಆತನಿಗೆ ಏನನ್ನು ಅರ್ಪಿಸಬೇಕು? ಯಾವ ಸೇವೆಯನ್ನು ಕೈಗೊಳ್ಳಬೇಕು? ಇದು ನಮ್ಮನ್ನು ಸದಾ ಕಾಡುವ ಪ್ರಶ್ನೆ. ಆದರೆ ಈ ಬಗ್ಗೆ ನಮಗೆ ಯಾವುದೇ ದ್ವಂದ್ವವಾಗಲೀ ಕೀಳಿರಿಮೆಯಾಗಲೀ ಇರಕೂಡದೆಂದು ಗೀತೆಯಲ್ಲಿ ಶ್ರೀ ಕೃಷ್ಣ ತನ್ನ ಭಕ್ತ ಸಮೂಹಕ್ಕೆ ಹೀಗೆ ಹೇಳುತ್ತಾನೆ: ‘ನನ್ನ ಪ್ರಿಯಭಕ್ತರು ನನಗಾಗಿ ಪೀತಿಯಿಂದ ಏನನ್ನು ಸಮರ್ಪಿಸುತ್ತಾರೋ ಅದನ್ನು ನಾನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇನೆ. ಅದು ಪತ್ರವೇ ಇರಲಿ. ಪುಷ್ಪವೇ ಇರಲಿ, ಹಣ್ಣು, ನೀರು ಅಥವಾ ಇನ್ನೇನು ಬೇಕಾದರೂ ಇರಲಿ; ಶುದ್ಧ ಚಿತ್ತದಿಂದ ಭಕ್ತಿಯಿಂದ ನನಗೆ ಅರ್ಪಿಸಲಾದದ್ದನ್ನು ನಾನು ನಿಶ್ಚಿತವಾಗಿಯೂ ಸ್ವೀಕರಿಸುತ್ತೇನೆ’. ದೇವರಿಗೆ ಭಕ್ತಿ ಮತ್ತು ಶುದ್ಧ ಚಿತ್ತ ಮುಖ್ಯವೇ ವಿನಾ ನಾವು ಅರ್ಪಿಸುವ ವಸ್ತುಗಳ ಮೌಲ್ಯ ಮುಖ್ಯವಲ್ಲ/ ಇಷ್ಟಕ್ಕೂ ಮೌಲ್ಯವನ್ನು ಕಟ್ಟುವ ಬುದ್ಧಿ ಪರಿಮಿತ ಜ್ಞಾನವುಳ್ಳ ಕೇವಲ ಮನುಷ್ಯರ ವ್ಯಾಪಾರವೇ ವಿನಾ ದೇವರದ್ದಲ್ಲ! ದೇವರಲ್ಲಿ ನಮ್ಮ ಯಾವತ್ತೂ ಪ್ರಾರ್ಥನೆಗಳು ಇಹಲೋಕದ ಸುಖ, ಸಂತೋಷ, ಐಶಾರಾಮಕ್ಕೆ ಸಂಬಂಧಿಸಿಲ್ಲವಾದರೆ ನಾವು ದೇವರನ್ನು ಸಂತುಷ್ಟಿಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವೇ ಇಲ್ಲ. ದೇವ ಸನ್ನಿಧಿಯನ್ನು ಸೇರುವುದೊಂದೇ ಆರಾಧನೆಯ ಗುರಿಯಾಗಿರುವಲ್ಲಿ ಅನ್ಯ ವಿಷಯಗಳ ಚಿಂತೆ ನಮಗೇಕೆ?

   

Related Articles

error: Content is protected !!