Home » ಐಹಿಕ ಸುಖಕ್ಕಾಗಿ ‘ಭಕ್ತಿ’
 

ಐಹಿಕ ಸುಖಕ್ಕಾಗಿ ‘ಭಕ್ತಿ’

by Kundapur Xpress
Spread the love
  1. ಐಹಿಕ ಸುಖಕ್ಕಾಗಿ ‘ಭಕ್ತಿ’

ದೇವರ ಮೇಲೆ ಭಕ್ತಿಯನ್ನಿಡಬೇಕು; ಆತನನ್ನು ಪ್ರೀತಿಸಬೇಕು ಎಂದು ಹೇಳಿದರೆ ಭಾವನೆಗಳು ಸುಲಭದಲ್ಲಿ ಅರ್ಥವಾಗುವುದಿಲ್ಲ. ಅಥವಾ ಬಗ್ಗೆ ನಾವು ಯಥಾರ್ಥ ಚಿಂತನೆಯನ್ನು ಮಾಡಲು ಮುಂದಾಗುವುದಿಲ್ಲ. ದೇವರ ಮೇಲೆ ಭಕ್ತಿಯನ್ನಿಡುವುದೆಂದರೆ ದೇವಸ್ಥಾನಕ್ಕೆ ಹೋಗುವುದು, ದೇವರ ವಿಗ್ರಹಕ್ಕೆ ವಂದಿಸುವುದು; ಉದ್ದಂಡ ನಮಸ್ಕಾರ ಹಾಕುವುದು, ತೀರ್ಥ-ಗಂಧ ಸ್ವೀಕರುಸುವುದು… ಹೀಗೆ ಭಕ್ತಿ ಎಂದರೆ ಕೇವಲ ತೋರಿಕೆಯ ವಿಷಯಗಳು ಆದಾವು. ಇದರಿಂದ ದೇವರ ಮೇಲೆ ನಮಗೆ ಭಯ-ಭಕ್ತಿ ಇದೆ ಎನ್ನುವುದು ಇತರರ ಗಮನಕ್ಕೆ ಬಂದಿತೇ ವಿನಾ ನಮ್ಮ ಅನುಭವಕ್ಕೆ ಮಾತ್ರ ಬರುವುದಿಲ್ಲ. ಇದು ಯಾಕೆ ಹೀಗೆ? ದೇವರ ವಿಷಯದಲ್ಲಿ ನಿಜಕ್ಕೂ ನಾವು ನಮ್ಮನ್ನು ವಂಚಿಸಿಕೊಳ್ಳುತ್ತಿಲ್ಲವಷ್ಟೇ? ದೇವರ ಮೇಲೆ ನಿಜಕ್ಕೂ ನಮಗೆ ಆಂತರ್ಯದಲ್ಲಿ ಭಯ-ಭಕ್ತಿ ಇಲ್ಲವೇ? ಇರುವುದೇ ಆದರೆ ನಮ್ಮನ್ನು ನಾವು ಮರೆಯುವಷ್ಟರ ಮಟ್ಟಿಗಾದರೂ ಭಕ್ತಿ ನಮ್ಮ ಅನುಭವಕ್ಕೆ ಏಕೆ ಬರುವುದಿಲ್ಲ? ದೇವರನ್ನು ನೆನೆದು ಕೈ ಮುಗಿದು ನಿಂತರೆ ಮನಸ್ಸಿನಲ್ಲಿ ಪ್ರಕಟವಾಗುವುದು ದೇವರ ಬಿಂಬ ಅಲ್ಲ, ಬದಲು ಐಹಿಕ ಐಶಾರಾಮಕ್ಕೆ ಕೊರತೆಯಾಗಿ ಕಾಡುವ ಅಂಶಗಳು ಮಾತ್ರ. ‘ಎಲ್ಲ ಕೊರತೆಗಳನ್ನು ಬೇಗನೆ ತುಂಬಿಕೊಂಡು ದೇವರೇ’ ಎಂಬ ಕೋರಿಕೆಯಷ್ಟೇ ಮನಸ್ಸಿನಲ್ಲಿ ದಿಢೀರನೆ ಪ್ರಕಟಗೊಳ್ಳುತ್ತದೆ. ದೇವರಿಗಿಂತಲೂ ಮಿಗಿಲಾಗಿ ನಾವು ನಿಜಕ್ಕೂ ಪ್ರೀತಿಸುವುದು ಇಂದ್ರಿಯ ವಿಷಯಗಳನ್ನು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ? ನಾವು, ನಮ್ಮ ಹೆಂಡತಿ, ಮಕ್ಕಳು, ಬಂಧು-ಬಾಂಧವರು ಮತ್ತು ನಮ್ಮನ್ನು ಸೇರಿಸಿ ಎಲ್ಲ ಜನರಿಗೆ ಸುಖ-ಸಂಪತ್ತು ಕರುಣಿಸೆಂದು ತಾನೇ ನಾವು ನಿರಾಯಾಸವಾಗಿ ದೇವರಲ್ಲಿ ದಿನನಿತ್ಯ ಬೇಡುವುದು? ಇದನ್ನೇ ನಾವು ‘ದೇವರಲ್ಲಿಡುವ ಭಕ್ತಿ’ ಎಂದು ಕರೆದರೆ ಸರಿಯಾದೀತೇ? ಇಂತಹ ಸ್ಥಿತಿಯಲ್ಲಿ ಗುಡಿಗೆ ಹೋಗುವವರನ್ನು ಕಂಡು ಸರ್ವಜ್ಞ ನಿರ್ದಾಕ್ಷಿಣ್ಯವಾಗಿ ಹೇಳುತ್ತಾನೆ: ಚಿತ್ತವಿಲ್ಲದೆ ಗುಡಿಯ ಸುತ್ತಿದರೆ ಫಲವೇನು? ಎತ್ತು ಗಾಣವ ಸುತ್ತಿದಂತೆ!

   

Related Articles

error: Content is protected !!