210
ನವದೆಹಲಿ: ಲೋಕಸಭಾ ಚುನಾವಣಾಪ್ರಚಾರದ ಭಾಗವಾಗಿ ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ 200ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿ ಹಾಗೂ ಅದು ಮುಗಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಸತತ 45 ಗಂಟೆ ಧ್ಯಾನಕ್ಕೆ ಮೊರೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಸತತ 7 ಸಭೆ ನಡೆಸುವ ಮೂಲಕ ವಿವಿಧ ವಿಷಯಗಳ ಕುರಿತು ಅವಲೋಕನ ನಡೆಸಿದ್ದಾರೆ
ಇಡೀ 7 ಹಂತದ ಚುನಾವಣಾ ಪ್ರಕ್ರಿಯೆ ಶನಿವಾರ ಮುಗಿಯುತ್ತಿದ್ದಂತೆಯೇ ಭಾನುವಾರ ಬೆಳಗ್ಗೆಯಿಂದಲೇ ಹಿರಿಯ ಅಧಿಕಾರಿಗಳ ಜೊತೆ ಸತತವಾಗಿ ಪ್ರಧಾನಿ ಮೋದಿ ಸಭೆ ನಡೆಸಿದರು. ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬರುವ ಖಚಿತ ವಿಶ್ವಾಸದಲ್ಲಿರುವ ಅವರು, ಹೊಸ ಸರ್ಕಾರದ ಮೊದಲ 100 ದಿನದಲ್ಲಿ ಜಾರಿಗೊಳಿಸಬೇಕಾದ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು. ಈ ಕಾರ್ಯಸೂಚಿ ಕುರಿತು ಹೊಸ ಸರ್ಕಾರದ ಮೊದಲ ಮಂತ್ರಿಮಂಡಲ ಸಭೆಯಲ್ಲೇ ಅನುಮೋದನೆ ಪಡೆಯುವ ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ

