Home ರಾಷ್ಟ್ರೀಯ ಸುದ್ದಿಪಾಕ್‌ ಬದಿಯ ವಾಘಾ ಗಡಿ ಮುಳುಗಡೆ

ಪಾಕ್‌ ಬದಿಯ ವಾಘಾ ಗಡಿ ಮುಳುಗಡೆ

ಭಾರತದ ಕಡೆ ಪ್ರವಾಹವಿಲ್ಲ

by Kundapur Xpress

ಅಮೃತಸರ : ಕಳೆದ ಕೆಲವು ದಿನಗಳಿಂದ ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ, ಹಲವೆಡೆ ಅವಾಂತರಗಳು ಸೃಷ್ಟಿಯಾಗಿರುವ ನಡುವೆಯೇ, ಪಾಕಿಸ್ತಾನದ ವಾಘಾ ಗಡಿಯಲ್ಲಿ ನೀರು ತುಂಬಿಕೊಂಡು ಮುಜುಗರದ ಸಂದರ್ಭವೊಂದು ಸೃಷ್ಟಿಯಾಗಿದೆ.

ಪ್ರತಿನಿತ್ಯ ಸಂಜೆ ಬೀಟಿಂಗ್ ರಿಟ್ರೇಟ್ ನಡೆಯುವ ಈ ಗಡಿಯ ಪಾಕಿಸ್ತಾನದ ಕಡೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದರೆ, ಭಾರತದ ಬದಿಯ ರಸ್ತೆ ತೊಳೆ ದಿಟ್ಟಂತೆ ಸ್ವಚ್ಛವಾಗಿದೆ. ಭಾರತೀಯ ಯೋಧರು ಎಂದಿನ ಗತ್ತಿನಲ್ಲಿ ಪರೇಡ್ ಮಾಡಿದರೆ, ಪಾಕ್ ಸೈನಿಕರು ನೀರಲ್ಲಿ ನಿಂತು ಪೌರುಷ ಪ್ರದರ್ಶನ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ ತನ್ನ ಸ್ಥಿತಿಗೆ ಭಾರತವನ್ನು ದೂಷಿ ಸಿರುವ ಪಾಕಿಸ್ತಾನ, ಭಾರತ ತನ್ನ ರಸ್ತೆಯನ್ನು ಎತ್ತರಿಸಿರುವ ಕಾರಣದಿಂದ ಹೀಗಾಗಿದೆ ಎಂದಿದೆ

Related Articles