Home » ಅಮೆರಿಕದಿಂದ 112 ಭಾರತೀಯರ ಆಗಮನ
 

ಅಮೆರಿಕದಿಂದ 112 ಭಾರತೀಯರ ಆಗಮನ

by Kundapur Xpress
Spread the love

ಚಂಡೀಗಢ : 112 ಮಂದಿ ಭಾರತೀಯರನ್ನು ಹೊತ್ತ ಅಮೆರಿಕ ವಾಯುಪಡೆಯ ವಿಶೇಷ ವಿಮಾನ ಸಿ17 ಗ್ಲೋಬ್ಬಾಸ್ಟರ್ ಭಾನುವಾರ ತಡರಾತ್ರಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ಭಾಗವಾಗಿ ಗಡಿಪಾರು ಮಾಡಲಾದವರನ್ನು ಕರೆತರುತ್ತಿರುವ ಮೂರನೇ ವಿಮಾನ ಇದಾಗಿದೆ.

ವಿಮಾನವು ರಾತ್ರಿ 10.00ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಅಮೆರಿಕದಿಂದ ಬಂದ ವಿಮಾನವು  ಅಮೃತಸರದ ಶ್ರೀ ಗುರುರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರಲ್ಲಿ 112 ಮಂದಿ ಗಡಿಪಾರು ಆದವರಿದ್ದರು ಎಂದು ಅಮೃತಸರ ಉಪಆಯುಕ್ತ ಸಾಕ್ಷಿಸಾಹಿ ತಿಳಿಸಿದ್ದಾರೆ.

 

Related Articles

error: Content is protected !!