Home » ಅಮೆರಿಕದಲ್ಲಿ ಇಸ್ರೇಲಿ ರಾಯಭಾರ ಸಿಬ್ಬಂದಿಗಳ ಹತ್ಯೆ
 

ಅಮೆರಿಕದಲ್ಲಿ ಇಸ್ರೇಲಿ ರಾಯಭಾರ ಸಿಬ್ಬಂದಿಗಳ ಹತ್ಯೆ

by Kundapur Xpress
Spread the love

ನ್ಯೂಯಾರ್ಕ್‌ : ವಾಷಿಂಗ್ಟನ್ ಡಿಸಿಯ ಯಹೂದಿ ವಸ್ತುಸಂಗ್ರಹಾಲಯದ ಬಳಿ ಅಪರಿಚಿತ ದಾಳಿಕೋರರು ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯಮ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಬಂಧಿಸಲಾಗಿದೆ. ವಾಯುವ್ಯದಲ್ಲಿರುವ 3ನೇ ಮತ್ತು ಎಫ್ ಬೀದಿಗಳ ಪ್ರದೇಶದಲ್ಲಿ, ಯಹೂದಿ ವಸ್ತುಸಂಗ್ರಹಾಲಯದ ಬಳಿ ಓರ್ವ ಮಹಿಳೆ ಮತ್ತು ಪುರುಷ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯು ಪೋಸ್ಟ್‌ನಲ್ಲಿ ದಾಳಿಯನ್ನು ಖಂಡಿಸಿದ್ದು, ಅವರ ಸಹೋದ್ಯೋಗಿಗಳು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದೆ. ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ವಾಷಿಂಗ್ಟನ್‌ನಲ್ಲಿ ಅಮೆರಿಕ ಅಟಾರ್ನಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ನ್ಯಾಯಾಧೀಶ ಜೀನೈನ್ ಪಿರೋ ಅವರೊಂದಿಗೆ ಸ್ಥಳದಲ್ಲಿದ್ದರು.

 

Related Articles

error: Content is protected !!