ಹೊಸದಿಲ್ಲಿ : ದೀರ್ಘ ಕಾಲದ ವಿಳಂಬದ ಬಳಿಕ ಟ್ಯಾಂಕ್ಸ್ ಇನ್ ದಿ ಏರ್ (ಹಾರಾಟದ ವೇಳೆಯೇ ಎರಡು ವಿಮಾನಗಳಿಗೆ ಇಂಧನ ತುಂಬಿಸುವ ಕ್ಷಮತೆಯುಳ್ಳ) ಎಂದೇ ಹೆಸರಾಗಿರುವ ಅಮೆರಿಕದ ಎಎಚ್-64ಇ ಅಪಾಚೆ 3 ಹೆಲಿಕಾಪ್ಟರ್‌ಗಳು ಮಂಗಳವಾರ ಭಾರತೀಯ ಸೇನೆಗೆ ಸೇರ್ಪಡೆಗೊಂಡವು. ಇದರೊಂದಿಗೆ ಭಾರತೀಯ ಸೇನೆಯ ಕಾರ್ಯಾಚರಣೆ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ದೊರಕಿದಂತಾಗಿದೆ.
ಹೆಲಿಕಾಪ್ಟರ್ ಗಳನ್ನು ಜೋಧ್ಪುರದಲ್ಲಿ ನಿಯೋಜಿಸಲಾಗುವುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಜೋಡಣೆ, ಜಂಟಿ ರಸೀದಿ ಪರಿಶೀಲನೆ (ಜೆಆರ್‌ಐ), ಇತರ ಕಾರ್ಯ ವಿಧಾನಗಳನ್ನು ಶಿಷ್ಟಾಚಾರದ ಪ್ರಕಾರ ಅನುಸರಿಸಲಾಗುತ್ತದೆ ಎಂದು ಹೇಳಿದ್ದಾರೆ
ಈ ಬೆಳವಣಿಗೆ ದೃಢೀಕರಿಸಿದ ಭಾರತೀಯ ಸೇನೆಯು, ಎಕ್ಸ್ ಪೋಸ್ಟ್‌ನಲ್ಲಿ, ಅಪಾಚೆ ಹೆಲಿಕಾಪ್ಟರ್ ಚಿತ್ರಗಳನ್ನು ಆರ್ಮಿ ಏವಿಯೇಷನ್‌ಗಾಗಿ ಹಂಚಿಕೊಂಡಿದೆ. ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಮಂಗಳವಾರ ಭಾರತಕ್ಕೆ ಆಗಮಿಸಿರುವುದು ಭಾರತೀಯ ಸೇನೆಗೆ ಮೈಲಿಗಲ್ಲು ಕ್ಷಣವಾಗಿದೆ ಎಂದು ಪೋಸ್ಟ್ ಉಲ್ಲೇಖಿಸಿದೆ. ಈ ಅತ್ಯಾಧುನಿಕ ವೇದಿಕೆಗಳು ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಹೇಳಿದೆ.

