Home » 3 ಕುಖ್ಯಾತ ಲಷ್ಕರ್ ಉಗ್ರರು ಸೇನೆ ಗುಂಡಿಗೆ ಬಲಿ
 

3 ಕುಖ್ಯಾತ ಲಷ್ಕರ್ ಉಗ್ರರು ಸೇನೆ ಗುಂಡಿಗೆ ಬಲಿ

by Kundapur Xpress
Spread the love

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆಗಳು ಮಂಗಳವಾರ ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಮೂವರನ್ನು ಉಗ್ರರನ್ನು ಹತ್ಯೆಗೈಯಲಾಗಿದೆ. ಹತ್ಯೆಯಾದವರ ಪೈಕಿ ಲಷ್ಕರ್‌ಎ ತೊಯ್ದಾ ಕಮಾಂಡರ್ ಶಾಹಿದ್ ಕುಟ್ಟಾಯ್ ಕೂಡಾ ಸೇರಿದ್ದಾನೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್‌ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಆರಂಭಿಸಿದ್ದವು ಆ ವೇಳೆ ಉಗ್ರರು ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಗೆ ಯತ್ನಿಸಿದರು. ಆಗ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ‘ಎನ್‌ಕೌಂಟರ್‌ಗೆ ಬಲಿಯಾದ ಮೂರೂ ಉಗ್ರರು ಎಲ್‌ಇಟಿಗೆ ಸೇರಿದವರು.

ಅವರಲ್ಲಿ ಒಬ್ಬ ಎಲ್‌ಇಟಿ ಕಮಾಂಡರ್‌ ಶಾಹಿದ್ ಕುಟ್ಟಾಯ್, ಮತ್ತೊಬ್ಬ ಅಫ್ಘಾನ್ ಶಫಿದಾರ್, ಇನ್ನೊಬ್ಬ ಹ್ಯಾರಿಸ್ ನಾರ್ಸಿ, ಕುಟ್ಟಾಯ್ ‘ಎ’ ವರ್ಗದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಸಂಘಟನೆಯಲ್ಲಿ ಬಹಳ ಪ್ರಭಾವಿಯೆನಿಸಿದ್ದ. 2024ರಲ್ಲಿ ಬಿಜೆಪಿ ಸರಪಂಚನ ಹತ್ಯೆ, ಡ್ಯಾನಿಷ್ ರೆಸಾರ್ಟ್ ಮೇಲೆ ದಾಳಿ ಮಾಡಿ ಇಬ್ಬರು ಜರ್ಮನ್ ಪ್ರಜೆಗಳ ಸಾವಿಗೆ ಕಾರಣನಾಗಿದ್ದ. ಶಫಿ ಕಳೆದ ವರ್ಷ ಶೋಪಿಯಾನ್‌ನಲ್ಲಿ ವಲಸೆ ಕಾರ್ಮಿಕನ ಹತ್ಯೆಗೈದಿದ್ದ ನಾಸಿರ್ ಸಹ ಜರ್ಮನ್ ಪ್ರಜೆಗಳ ಹತ್ಯೆ ಅಪರಾಧಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Related Articles

error: Content is protected !!