128
ಶ್ರೀನಗರ : ಭಾರತೀಯ ಸೇನೆಯ ಎಲೈಟ್ ಪ್ಯಾರಾ ಕಮಾಂಡೋಗಳು ಸೋಮವಾರ ಶ್ರೀನಗರದ ಹೊರವಲಯದ ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಏಪ್ರಿಲ್ 22ರ ಪಹಲ್ಲಾಮ್ ಭಯೋತ್ಪಾದಕ ದಾಳಿಯ ರೂವಾರಿ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಆತನ ಇಬ್ಬರು ಸಹಚರರನ್ನು ಹೊಡೆದುರುಳಿಸಿದ್ದಾರೆ
ಪಹಲ್ಲಾಮ್ ದಾಳಿಯ ಸಮಯದಲ್ಲಿ ಬಳಸಿದ ಸ್ಯಾಟಲೈಟ್ ಫೋನ್ ಆಧರಿಸಿ ತನಿಖೆ ನಡೆಸಿದಾಗ ದಾಳಿಯ ರೂವಾರಿ ಮೂಸಾ ಎಂದು ತಿಳಿದುಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಪರೇಷನ್ ಮಹದೇವ ಎಂಬ ಸಂಕೇತನಾಮದ ಈ ಕಾರ್ಯಾಚರಣೆಯಲ್ಲಿ ಕಳೆದ ವರ್ಷದ ಸೋನ್‌ಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಹಾ ಅಫ್ಘಾನಿಯನ್ನೂ ಸೇನೆ ಸದೆಬಡಿದಿದೆ

