ಶ್ರೀನಗರ : ಜಮ್ಮು- ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಕಾಲ್ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ, ಲಷ್ಕರ್ ಕಮಾಂಡರ್ ಸುಲೇಮಾನ್ ಷಾ ಅಲಿಯಾಸ್ ಮೂಸಾ ಫೌಜಿ ಸೇರಿ ಮೂವರು ಪಾಕಿಸ್ತಾನಿ ಟಿಆರ್‌ಎಫ್ ಭಯೋತ್ಪಾದಕರು ಹತರಾಗಿದ್ದಾರೆ.
ನಿಷೇಧಿತ ಲಷ್ಕರ್-ಎ-ತೊಯ್ದಾದ (ಎಲ್‌ಇಟಿ) ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ಗೆ (ಟಿಆರ್ ಎಫ್) ಸಂಬಂಧಿಸಿದ ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ನಂತರ, ಆಪರೇಷನ್ ಅಕಾಲ್ ಎಂದು ಕರೆಯಲಾಗಿರುವ ಈ ಕಾರ್ಯಾಚರಣೆ ಪ್ರಾರಂಭವಾಗಿತ್ತು.
ಪಹಲ್ಲಾಮ್ ದಾಳಿಗೆ ಸಂಬಂಧ :
ಈ ಭಯೋತ್ಪಾದಕರಿಗೆ ಇತ್ತೀಚೆಗೆ ನಡೆದ ಪಹಲಲ್ಗಾಮ್ ದಾಳಿಯೊಂದಿಗೆ ಸಂಪರ್ಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಗುಪ್ತಚರ ವರದಿಗಳ ಆಧಾರದ ಮೇಲೆ ಭಾರತೀಯ ಸೇನೆ, ಸಿಆರ್‌ಪಿಎಫ್, ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶ್ರೀನಗರದ ಬಳಿಯ ದಾಚಿ ಗಾಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಯೋತ್ಪಾದಕರು ಅಡಗಿದ್ದರು ಎಂದು ಶಂಕಿಸಲಾಗಿದೆ.

