69
ಗಡ್ಡಿರೋಲಿ : ಮಹಾರಾಷ್ಟ್ರ – ಛತ್ತೀಸ್ ಗಢ ಗಡಿಯಲ್ಲಿ ಗಡ್ಡಿರೋಲಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರ ವಿಶೇಷ ಕಮಾಂಡೋ ಘಟಕ ಸಿ -60 ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ.
ಮಹಾರಾಷ್ಟ್ರ-ಛತ್ತೀಸ್ ಗಢ ಗಡಿಯಲ್ಲಿ ಕವಾಂಡೆ ಪ್ರದೇಶದಲ್ಲಿ ಇತ್ತೀಚೆಗೆ ತೆರೆಯಲಾದ ಎಫ್‌ಒಬಿ (ಫಾರ್ವಡ್್ರ ಆಪರೇಟಿಂಗ್ ಬೇಸ್) ಬಳಿ ಮಾವೋವಾದಿಗಳ ರಚನೆಗಳ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಗುರುವಾರ ಮಧ್ಯಾಹ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. 12 ಸಿ-60 ತಂಡಗಳು (300 ಕಮಾಂಡೋಗಳು) ಮತ್ತು ಸಿಆರ್ ಪಿಎಫ್‌ನ ಒಂದು ಘಟಕವು ಕವಾಂಡೆ ಮತ್ತು ನೆಲಗುಂದ ಪ್ರದೇಶಗಳಿಂದ ಇಂದ್ರಾವತಿ ನದಿಯ ದಡದ ಕಡೆಗೆ ಭಾರೀ ಮಳೆಯ ನಡುವೆಯೂ ಕಾರ್ಯಾಚರಣೆಯನ್ನು ನಡೆಸಿತು

