68
ನವದೆಹಲಿ : ದೇಶಾದ್ಯಂತ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಪ್ರಧಾನಿ ಮೋದಿಯವರು ಪ್ರಾರಂಭಿಸಿರುವ ರೋಜ್‌ಗಾರ್ ಮೇಳದ 16ನೇ ಆವೃತ್ತಿ ಶನಿವಾರ ದೇಶದ 47 ಕಡೆಗಳಲ್ಲಿ ನಡೆಯಲಿದೆ.
ಈ ವೇಳೆ ಮೋದಿಯವರು ವಿಡಿಯೋ ಕಾನ್ಸರೆನ್ಸ್ ಮೂಲಕ 51,000 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ ಎಂದು ಪ್ರಧಾನ ‘ಮಂತ್ರಿಗಳ ಕಚೇರಿ (ಪಿಎಂಒ) ತಿಳಿಸಿದೆ.
ಇದುವರೆಗೆ ರೋಜ್‌ಗಾರ್ ಮೇಳದ ಮೂಲಕ ದೇಶಾದ್ಯಂತ 10. ಲಕ್ಷಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ’ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

