128
ಅಹಮದಾಬಾದ್ : ಗುರುವಾರ ಪತನವಾದ ಏರ್‌ಇಂಡಿಯಾ ವಿಮಾನ ಮನೆಗಳಿಗೆ ತೀರಾ ಸಮೀಪದಲ್ಲಿ ಹಾದುಹೋಗಿತ್ತು. ಪೈಲಟ್ ಸಮಯಪ್ರಜ್ಞೆ ತೋರಿದ್ದರಿಂದ ವಸತಿ ಪ್ರದೇಶದಲ್ಲಿದ್ದ ಸುಮಾರು 1,500 ರಿಂದ 2,000 ಜನರ ಪ್ರಾಣ ಉಳಿಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ವಿಮಾನ ಪತನವಾಗುವಾಗ ನಾವು ಕ್ರಿಕೆಟ್ ಆಡುತ್ತಿದ್ದೆವು. ವಿಮಾನ ನಮ್ಮ ಮೇಲೆ ತೀರಾ ಹತ್ತಿರದಿಂದ ಹಾದುಹೋಯಿತು. ಅವಘಡದ ಸದ್ದು ಕೇಳಿ, ಸ್ಥಳಕ್ಕೆ ಓಡಿದೆವು. ವಿಮಾನ ಅಪಾಯಕಾರಿಯಾಗಿ ಮನೆಗಳಿಗೆ ಸಮೀಪದಲ್ಲೇ ಹಾದು ಹೋಯಿತು. ಪೈಲಟ್ ವಸತಿ ಪ್ರದೇಶದಿಂದ ವಿಮಾನವನ್ನು ಬೇರೆಡೆ ತಿರುಗಿಸಿ ಸುಮಾರು 2,000 ಜನರ ಪ್ರಾಣ ಉಳಿಸಿದ್ದಾರೆ. ಅವರಿಗೆ ಸೆಲ್ಯೂಟ್’ ಎಂದಿದ್ದಾರೆ.

