Home » ಕುಂಭಮೇಳ : ಗಗನಕ್ಕೇರಿದ್ದ ವಿಮಾನ ದರ 50% ಇಳಿಕೆ
 

ಕುಂಭಮೇಳ : ಗಗನಕ್ಕೇರಿದ್ದ ವಿಮಾನ ದರ 50% ಇಳಿಕೆ

ಪ್ರಹ್ಲಾದ್‌ ಜೋಶಿ ಸೂಚನೆ ಹಿನ್ನಲೆ

by Kundapur Xpress
Spread the love

ನವದೆಹಲಿ : ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಸೇವೆ ನೀಡುತ್ತಿರುವ ವಿಮಾನಯಾನ ಸಂಸ್ಥೆಗಳ ದರ ಏರಿಕೆ ಬರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಡಿವಾಣ ಹಾಕಿದ್ದಾರೆ. ಕಂಪನಿಗಳ ಈ ಅಟಾಟೋಪದ ಬಗ್ಗೆ ಸಚಿವ ಜೋಶಿ ಬುಧವಾರವಷ್ಟೇ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.

ಅದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶ ನಾಲಯವು ದರ ಇಳಿಕೆ ಮಾಡುವಂತೆ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. ಜೊತೆಗೆ ದರವನ್ನು ಮಿತಿಯಲ್ಲೇ ಇರಿಸುವಂತೆ ಸೂಚಿಸಿದೆ. ಪರಿಣಾಮವಾಗಿ ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಕಂಪನಿಗಳು ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್ ದರವನ್ನು ಶೇ.30ರಿಂದ ಶೇ.50ರವರೆಗೂ ಇಳಿಸಿವೆ. ವಿಮಾನ ಟಿಕೆಟ್ ದರ ಏರಿಕೆ ಬಗ್ಗೆ ಬುಧವಾರ ಬೆಳಗ್ಗೆ ಕಳವಳ ವ್ಯಕ್ತಪಡಿಸಿಜೋಶಿ ಅವರು ಪತ್ರ ಬರೆದಿದ್ದರು.

 

Related Articles

error: Content is protected !!