143
ಅಹಮದಾಬಾದ್ : ಅಹಮದಾಬಾದ್‌ನಲ್ಲಿ. ಇತ್ತೀಚೆಗೆ ಸಂಭವಿಸಿದ ಅಪಘಾತದ ನಂತರ ತೀವ್ರ ಸುರಕ್ಷತಾ ತಪಾಸಣೆಯ ಭಾಗವಾಗಿ ತಾಂತ್ರಿಕ ಸಮಸ್ಯೆಗಳು ಮತ್ತು ವಿಮಾನಗಳ ಅಲಭ್ಯತೆಯಿಂದಾಗಿ ಏರ್ ಇಂಡಿಯಾ ಮಂಗಳವಾರ ಏಳು ಅಂತಾ ರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆ.
ರದ್ದಾದ ವಿಮಾನಗಳಲ್ಲಿ ಆರು ವಿಮಾನಗಳು ಬೋಯಿಂಗ್ 787-8 ಡ್ರೀಮ್ ಲೈನರ್‌ಗಳಾಗಿವೆ. ವಿಮಾನ ಹಾರಾಟದ ಪೂರ್ವ ತಪಾಸಣೆಯ ಸಮಯದಲ್ಲಿ ತಾಂತ್ರಿಕ ದೋಷಗಳು ಕಂಡುಬಂದ ನಂತರ ಅಹಮದಾಬಾದ್‌ನಿಂದ ಲಂಡನ್ (ಎಐ159) ಮತ್ತು ದಿಲ್ಲಿಯಿಂದ ಪ್ಯಾರಿಸ್ (ಎಐ143) ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಲಂಡನ್ -ಅಮೃತಸರ ಮತ್ತು ಬೆಂಗಳೂರು-ಲಂಡನ್ ಮಾರ್ಗ ಗಳ ವಿಮಾನಗಳೂ ರದ್ದಾಗಿವೆ

