Home » ಪಾಕ್‌ ದಾಳಿಯಿಂದ ಭಾರತಕ್ಕಾದ ಹಾನಿಯ ಬಗ್ಗೆ ಒಂದಾದರೂ ಫೋಟೋ ತೋರಿಸಿ
 

ಪಾಕ್‌ ದಾಳಿಯಿಂದ ಭಾರತಕ್ಕಾದ ಹಾನಿಯ ಬಗ್ಗೆ ಒಂದಾದರೂ ಫೋಟೋ ತೋರಿಸಿ

ಆಪರೇಶನ್‌ ಸಿಂದೂರ್‌ : ವಿದೇಶಿ ಮಾಧ್ಯಮಕ್ಕೆ ದೋವಲ್‌ ಸವಾಲ್

by Kundapur Xpress
Spread the love

ಚೆನ್ನೈ : ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ಏಪ್ರಿಲ್ 22ರಂದು ಪಹಲ್ಗಾಮ್‌ ನಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ ಆಪರೇಷನ್ ಸಿಂದೂ‌ರ್ ಬಗ್ಗೆ ತಿರುಚಿ ವರದಿ ಮಾಡಿದ್ದಕ್ಕಾಗಿ ವಿದೇಶಿ ಮಾಧ್ಯಮಗಳನ್ನು ಟೀಕಿಸಿದರು.

ಶುಕ್ರವಾರ ಐ ಐ ಟಿ ಮದ್ರಾಸ್‌ ನ 68ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದೊಳಗೆ ಆಗಿದೆ ಎಂಬ ಹಾನಿಗೆ ಪೂರಕವಾಗಿ ಒಂದೇ ಒಂದು ಛಾಯಾಚಿತ್ರದ ಪುರಾವೆ ಒದಗಿಸಿ ಎಂದು ವಿದೇಶಿ ಮಾಧ್ಯಮಗಳಿಗೆ, ವಿಶೇಷವಾಗಿ ದಿ ನ್ಯೂಯಾರ್ಕ್ ಟೈಮ್ಸ್‌ಗೆ ಸವಾಲು ಹಾಕಿದರು

ಯಾವುದೇ ಭಾರತೀಯ ರಚನೆಗೆ ಹಾನಿಯಾಗಿದ್ದರೆ ತೋರಿಸಿ, ಕೊನೇ ಪಕ್ಷ ಒಂದು ಗಾಜಿನ ಫಲಕ ಮುರಿದ ಫೋಟೋವನ್ನಾದರೂ ತೋರಿಸಿ ಎಂದರು. ಮೇ 7ರ ಮುಂಜಾನೆ ಪ್ರಾರಂಭವಾದ ಆಪರೇಷನ್ ಸಿಂದೂರ್ ಪಹಲ್ಗಾಮ್‌ ನಲ್ಲಿನ ಭಯೋತ್ಪಾದಕ ದಾಳಿಗೆ ಭಾರತದ ನೇರ ಮಿಲಿಟರಿ ಪ್ರತಿಕ್ರಿಯೆಯಾಗಿತ್ತು.

ಈ ದಾಳಿಯಲ್ಲಿ 9 ಶಿಬಿರಗಳಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸದೆಬಡಿಯಲಾಗಿದೆ. ಈ ಕಾರ್ಯಾಚರಣೆ ಬಳಿಕ, ಡೋನ್‌ಗಳು, ಕ್ಷಿಪಣಿಗಳು,, ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿ ಎರಡೂ ದೇಶಗಳು ದಾಳಿ-ಪ್ರತಿದಾಳಿ ನಡೆಸಿದ್ದರೂ ಭಾರತದ ದಾಳಿಯಿಂದ ಸಾರಿಗೆ ವ್ಯಾಪಕ ಹಾನಿಯಾಗಿತ್ತು. ಆದರೆ ಪಾಕ್ ಕ್ಷಿಪಣಿ ಡೋನ್ ಗಳನ್ನು ಹೊಡೆದುರುಳಿಸಲಾಗಿತ್ತು. ಮೇ 10ರಂದು ಮಿಲಿಟರಿ ಕ್ರಮಗಳನ್ನು ನಿಲ್ಲಿಸುವಂತೆ ಪಾಕ್ ಸೇನೆ ಮನವಿ ಮಾಡಿಕೊಂಡ ಮೇರೆಗೆ ಪರಸ್ಪರ ಒಪ್ಪಂದ ದೊಂದಿಗೆ ಕದನ ವಿರಾಮ ಘೋಷಣೆಯಾಗಿತ್ತು ಎಂದರು

 

Related Articles

error: Content is protected !!