Home » ಓದಿದ ಕಾಲೇಜಿಗೆ ಅಂಬಾನಿ 151 ಕೋಟಿ ದಾನ
 

ಓದಿದ ಕಾಲೇಜಿಗೆ ಅಂಬಾನಿ 151 ಕೋಟಿ ದಾನ

by Kundapur Xpress
Spread the love

ನವದೆಹಲಿ : ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು, ತಾವು ವ್ಯಾಸಂಗ ಮಾಡಿದ ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಸಿಟಿ) ಸಂಸ್ಥೆಗೆ 151 ಕೋಟಿ ರು. ದಾನ ನೀಡಿದ್ದಾರೆ.

ಅಂಬಾನಿ 1970ಯಲ್ಲಿ ಐಸಿಟಿಯಿಂದ ಪದವಿ ಪಡೆದಿದ್ದರು. ಈ ಬಗ್ಗೆ ತಮ್ಮ ಗುರುಗಳಾದ ಪ್ರೊ. ಎಂ.ಎಂ. ಶರ್ಮಾ ಅವರ ‘ಡಿವೈನ್ ಸೈಂಟಿಸ್ಟ್’ (ದೈವಿಕ ವಿಜ್ಞಾನಿ) ಪುಸ್ತಕದ ಪ್ರಕಟಣೆ ಸಮಾರಂಭದಲ್ಲಿ ಘೋಷಣೆ ಮಾಡಿದ ಅಂಬಾನಿ ಮೊದಲ ಬಾರಿ ಶರ್ಮಾ ಅವರ ಪಾಠ ಕೇಳಿದ್ದರಿಂದ ಹಿಡಿದು, ತಮ್ಮನ್ನು ಪ್ರೇರೇಪಿಸಿದ್ದನ್ನೂ ನೆನೆದರು ಹಾಗೂ ಶರ್ಮಾರನ್ನು ರಾಷ್ಟ್ರ ಗುರು ಎಂದರು.

 

Related Articles

error: Content is protected !!