Home » ಅಕ್ರಮ ವಲಸಿಗರು ಭಾರತಕ್ಕೆ ವಾಪಾಸ್
 

ಅಕ್ರಮ ವಲಸಿಗರು ಭಾರತಕ್ಕೆ ವಾಪಾಸ್

104‌ ಮಂದಿ ಅಕ್ರಮ ವಲಸಿಗರು

by Kundapur Xpress
Spread the love

ಅಮೃತಸರ : ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆಯ ಭಾಗವಾಗಿ 104 ಭಾರತೀ ಯರನ್ನು ಅಮೆರಿಕ ಸರ್ಕಾರವು ಭಾರತಕ್ಕೆ ಕಳುಹಿಸಿದೆ. 104 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕ ಸೇನಾಪಡೆಯ ವಿಮಾನ ಬುಧವಾರ ಮಧ್ಯಾಹ್ನ 1.55ಕ್ಕೆ ಪಂಜಾಬ್‌ನ ಅಮೃತಸರದಲ್ಲಿರುವ ಶ್ರೀ ಗುರುರಾಮ್ ದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಇದು ಟ್ರಂಪ್ 2.0 ಅವಧಿಯಲ್ಲಿ ಅಮೆರಿಕದಿಂದ ಗಡೀಪಾರುಗೊಳ್ಳುತ್ತಿರುವ ಭಾರತೀಯ ಅಕ್ರಮ ವಲಸಿಗರ ಮೊದಲ ಬ್ಯಾಚ್ ಇದಾಗಿದ್ದು, ಇನ್ನೂ ಸಾವಿರಾರು ಮಂದಿಯನ್ನು ಇದೇ ರೀತಿ ಗಡೀಪಾರು ಮಾಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಭಾರತಕ್ಕೆ ಬಂದಿಳಿದವರಲ್ಲಿ ಹರ್ಯಾಣ ಮತ್ತು ಗುಜರಾತ್ ತಲಾ 33, ಮಹಾರಾಷ್ಟ್ರ, ಉತ್ತರಪ್ರದೇಶದ ತಲಾ ಇಬ್ಬರು, ಚಂಡೀಗಢದ ಇಬ್ಬರು ಸೇರಿದ್ದಾರೆ

 

Related Articles

error: Content is protected !!