ಒಡಿಶಾ : ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ನಡೆದಿರುವ ಐದು ಹಂತಗಳ ಮತದಾನದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ 310 ಸ್ಥಾನಗಳು ಲಭಿಸಿವೆ, 6 ಮತ್ತು 7ನೇ ಹಂತದ ಮತದಾನ ಮುಗಿಯುತ್ತಲೇ ಈ ಸಂಖ್ಯೆ 400 ದಾಟಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪರ್ಧಾ ಕಣದಲ್ಲಿರುವ ಸಂಬಲ್ಪುರದಲ್ಲಿ ಎರಡು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯವನ್ನು ಬಾಬು-ರಾಜ್ನಿಂದ ಮುಕ್ತಗೊಳಿಸಿ, ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಅನುವು ಮಾಡಿಕೊಡಿ ಎಂದು ವಿನಂತಿಸಿದರು.