ಹೊಸದಿಲ್ಲಿ : ಬಿಜೆಪಿ ತನ್ನ ಸ್ಥಿರ ಕಾರ್ಯ ಕ್ಷಮತೆಯಿಂದಾಗಿ ಕೇಂದ್ರದಲ್ಲಿ ಕನಿಷ್ಠ 30 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಗೆಲುವು ಅದರ ಕಠಿಣ ಪರಿಶ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಗಲು ರಾತ್ರಿ ಶ್ರಮಿಸಿದರೆ ಮತ್ತು ನೀವು ನಿಮಗಾಗಿ ಬದುಕದೆ ದೇಶಕ್ಕಾಗಿ ಬದುಕಿದರೆ ಗೆಲುವು ನಿಮ್ಮದಾಗುತ್ತದೆ ಎಂದು ಹೇಳಿದರು.
ನಾನು ಬಿಜೆಪಿ ರಾಷ್ಟ್ರಾಧ್ಯಕ್ಷನಾಗಿದ್ದ ಸಮಯದಲ್ಲಿ ಬಿಜೆಪಿ ಮುಂದಿನ 30 ವರ್ಷ ಅಧಿಕಾರಿದಲ್ಲಿರುತ್ತದೆ ಎಂದಿದ್ದೆ. ಇದೀಗ ಅದರಲ್ಲಿ ಕೇವಲ 10 ವರ್ಷ ಮುಗಿದಿದೆ ಎಂದಿದ್ದಾರೆ. ಏಕರೂಪ ನಾಗರಿಕ ಸಂಹಿತೆಯ (ಏನಾಸಂ) ಬಗ್ಗೆ ಮಾತನಾಡಿದ ಶಾ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಶೀಘ್ರದಲ್ಲೇ ಏನಾಸಂ ಜಾರಿಗೆ ತರುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುವ ವೇಳೆ ನಮಗಿದ್ದ ಮುಖ್ಯ ಉದ್ದೇಶವೇ ಏನಾಸಂ ಜಾರಿಗೆ ತರುವುದು ಎಂದಿದ್ದಾರೆ.
ಯುಸಿಸಿಯನ್ನು ಪರಿಚಯಿಸುವುದು. ಕಾಂಗ್ರೆಸ್ ಅದನ್ನು ಮರೆತಿರಬಹುದು ಆದರೆ ನಾವು ಮರೆತಿಲ್ಲ. ನಾವು 370ನೇ ವಿಧಿಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನು ಮಾಡಿದ್ದೇವೆ. ನಾವು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನೇ ಮಾಡಿದ್ದೇವೆ. ಈಗ ಯುಸಿಸಿ ಉಳಿದಿದೆ. ನಾವು ಅದನ್ನೂ ಮಾಡುತ್ತೇವೆ ಎಂದು ಅವರು ಹೇಳಿದರು.

