94
ದ್ವಾರಕಾ : ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಪೂರ್ವಜರ ಊರಾದ ಜಾಮ್‌ನಗರದಿಂದ ದ್ವಾರಕಾಗೆ ಕೈಗೊಂಡಿದ್ದ 170 ಕಿ. ಮೀ. ಆಧ್ಯಾತ್ಮಿಕ ಪಾದಯಾತ್ರೆಯನ್ನು ಭಾನುವಾರ ಪೂರ್ಣ ಗೊಳಿಸಿದರು.
ಮಾ.29 ರಂದು ಪ್ರಾರಂಭ ಆದ ಈ ಪ್ರಯಾಣವು ಅವರ 30 ನೇ ಹುಟ್ಟುಹಬ್ಬಕ್ಕೆ 3 ದಿನಗಳ ಮೊದಲು ರಾಮ ನವಮಿಯಂದು ಅಂತ್ಯಗೊಂಡಿತು. ಭಾನುವಾರ ಮುಂಜಾನೆ ಶ್ರೀ ದ್ವಾರಕಾಧೀಶ ದೇವಸ್ಥಾನವನ್ನು ತಲುಪಿದರು. ಈ ವೇಳೆ ತಾಯಿ ಹಾಗೂ ಪತ್ನಿ ಇದ್ದರು. ಪಾದಯಾತ್ರೆಯುದ್ದಕ್ಕೂ ಅವರು ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರವನ್ನು ಪಠಿಸಿದ್ದು ವಿಶೇಷವಾಗಿತ್ತು

