69
ಅಯೋಧ್ಯೆ : ಜನ್ಮಭೂಮಿ ರಾಮ ಮಂದಿರದಲ್ಲಿ ಎರಡನೇ ಹಂತದ ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಎರಡನೇ ದಿನವಾದ ಬುಧವಾರ ವಿವಿಧ ಅಧಿವಾಸಗಳು ಪೂರ್ಣಗೊಂಡವು. ಮಂದಿರದ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್ ಸಹಿತ ಎಂಟು ಮಂದಿರಗಳಲ್ಲಿಇಂದು ಗುರುವಾರ ಏಕಕಾಲದಲ್ಲಿ ಪ್ರಾಣಪ್ರತಿಷ್ಠೆ ಸಂಪನ್ನಗೊಳ್ಳಲಿದೆ.
ಬುಧವಾರ ಜನ್ಮಭೂಮಿ ಸಂಕೀರ್ಣದಲ್ಲಿರುವ ಯಜ್ಞ ಮಂಟಪದ ಜೊತೆಗೆ, ಪ್ರಾಣಪ್ರತಿಷ್ಠೆಯ ಸ್ಥಳಗಳಲ್ಲಿಯೂ ಪೂಜೆ ನೆರವೇರಿಸಲಾಯಿತು. ಯಜ್ಞ ಮಂಟಪದಲ್ಲಿ ಆವಾಹಿತ ದೇವತೆಗಳ ಪೂಜೆಯನ್ನು ನಡೆಸಲಾಯಿತು. ವೇದ ಪೂಜೆ, ಷೋಡಶ ಮಾತೃಕೆ ಮತ್ತು ಸಪ್ತ ಮಾತೃಕೆ ಪೂಜೆ, ಯೋಗಿನಿ ಪೂಜೆ, ವಾಸ್ತು ಪೂಜೆ, ಕ್ಷೇತ್ರಪಾಲ ಪೂಜೆ, ಸರ್ವತೋಭದ್ರ ಪೂಜೆ, ನವಗ್ರಹ ಪೂಜೆ ಸಹಿತ ನಾನಾ ಪೂಜಾ ಅನುಷ್ಠಾನ ನಡೆದವು. ಅನ್ನಾಧಿವಾಸ, ಸರ್ವಔಷಧಿ ಅಧಿವಾಸದ ಜೊತೆಗೆ, ವಿಗ್ರಹಗಳಿಗೆ ಜಲಧಿವಾಸವನ್ನೂ ನಡೆಸಲಾಯಿತು. ಬಳಿಕ ಮಂದಿರ ಪರಿಸರದಲ್ಲಿ ವಿಗ್ರಹಗಳ ಮೆರವಣಿಗೆ ನಡೆಸಿ, ಶಯ್ಯಾಧಿವಾಸ ಮಾಡಲಾಯಿತು

