106
ಅಯೋಧ್ಯೆ : ಶ್ರೀ ರಾಮ ಜನ್ಮಭೂಮಿ ಮಂದಿರವು ಆಧ್ಯಾತ್ಮಿಕ ಶಕ್ತಿಯ ಕೇಂದ್ರ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನ ಮತ್ತು ಸನಾತನ ನಂಬಿಕೆಯ ವಿಶಿಷ್ಟ ಸಂಗಮದ ಸಂಕೇತವೂ ಆಗುತ್ತಿದೆ ಮಂದಿರ ನಿರ್ಮಾಣದಲ್ಲಿ ಟೈಟಾನಿಯಂ ಲೋಹವನ್ನು ಬಳಸುತ್ತಿರುವ ವಿಶ್ವದ ಮೊದಲ ದೇವಾಲಯ ಇದಾಗಿದೆ.
ಮಂದಿರದ ಕಿಟಕಿಗಳಿಗೆ ಟೈಟಾನಿಯಂನಿಂದ ಮಾಡಿದ ಗ್ರಿಲ್‌ಗಳನ್ನು(ಜಾಲರಿ) ಅಳವಡಿಸಲಾಗುತ್ತಿದೆ. ಪ್ರಯೋಗಾರ್ಥವಾಗಿ, ಮಂದಿರದ ಒಂದು ಕಿಟಕಿಗೆ ಟೈಟಾನಿಯಂ ಗ್ರಿಲ್ ಅಳವಡಿಸಿದ್ದು, ಇದಕ್ಕೆ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಸಿರು ನಿಶಾನೆ ತೋರಿಸಿದೆ. ಜನ್ಮಭೂಮಿ ರಾಮ ಮಂದಿರವು ಇಡೀ ದೇಶದಲ್ಲಿ ಟೈಟಾನಿಯಂ ಲೋಹವನ್ನು ಬಳಸುತ್ತಿರುವ ಮೊದಲ ದೇವಾಲಯವಾಗಿದೆ. ಮಂದಿರದ ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಟೈಟಾನಿಯಂನಿಂದಮಾಡಿದ ಗ್ರಿಲ್‌ಗಳನ್ನು ಅಳವಡಿಸಲಾಗುತ್ತಿದೆ

