Home » ರಾಮಮಂದಿರದಲ್ಲಿ ಮತ್ತೇ 18 ವಿಗ್ರಹಗಳ ಪ್ರತಿಷ್ಠಾಪನೆ
 

ರಾಮಮಂದಿರದಲ್ಲಿ ಮತ್ತೇ 18 ವಿಗ್ರಹಗಳ ಪ್ರತಿಷ್ಠಾಪನೆ

by Kundapur Xpress
Spread the love

ಅಯೋಧ್ಯೆ : ರಾಮಮಂದಿರದಲ್ಲಿ ಮತ್ತೊಮ್ಮೆ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಜರುಗಲಿದೆ. ಜೂನ್‌ನಲ್ಲಿ ಒದಗುವ ಶುಭ ಮುಹೂರ್ತದಲ್ಲಿ 18 ವಿಗ್ರಹಗಳ ಪ್ರಾಣಪ್ರತಿಷ್ಠೆ ಸಂಪನ್ನಗೊಳ್ಳಲಿದೆ. ಅದಕ್ಕೂ ಮುನ್ನ ವಿಗ್ರಹಗಳ ಪ್ರತಿಷ್ಠಾಪನೆ ನಡೆಸಲಾಗುತ್ತದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬುಧವಾರ ಈ ಕುರಿತು ಮಾಹಿತಿ ನೀಡಿದರು. ಅಕ್ಷಯ ತೃತೀಯ ದಿನವಾದ ಏ.30ರಂದು ಮಂದಿರದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಸ್ಥಾಪಿಸಲಾಗುತ್ತದೆ. ಜನ್ಮಭೂಮಿ ಸಂಕೀರ್ಣದಲ್ಲಿರುವ ಉಳಿದೆಲ್ಲ ಮಂದಿರ-ಗುಡಿಗಳಲ್ಲಿನ ವಿಗ್ರಹಗಳ ಜೊತೆಗೆ ಪ್ರಾಣಪ್ರತಿಷ್ಠೆಯು ಜೂನ್‌ನಲ್ಲಿ ಸಂಪನ್ನಗೊಳ್ಳಲಿದೆ. ಎಲ್ಲ ವಿಗ್ರಹಗಳ ಬಟ್ಟೆ, ಅಲಂಕಾರಕ್ಕಾಗಿ ಆಭರಣ ಇತ್ಯಾದಿಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿಗ್ರಹಗಳ ಪ್ರಾಣಪ್ರತಿಷ್ಠೆಗೂ ಎರಡು ದಿನಗಳ ಮೊದಲು ಜಲಾಧಿವಾಸ, ಧಾನ್ಯಾಧಿವಾಸ, ಔಷಧಾಧಿವಾಸ ಮತ್ತು ಶಯ್ಯ ಇತ್ಯಾದಿ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ ಎಂದು ಮಾಹಿತಿ ನೀಡಿದರು

 

Related Articles

error: Content is protected !!