63
ನವದೆಹಲಿ : ಅಯೋಧ್ಯೆಯ ರಾಮಮಂದಿರದ ಮೊದಲನೆ ಮಹಡಿಯಲ್ಲಿ ನಿರ್ಮಾಣವಾಗಿರುವ ‘ರಾಮ ದರ್ಬಾರ್’ ಪ್ರಾಣಪ್ರತಿಷ್ಠೆಯನ್ನು ಜೂ.5ರಂದು ನೆರವೇರಿಸಲಾಗುವುದು ಎಂದು ಶ್ರೀರಾಮ ಜನ ಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ರಾಜಕಾರಣಿಗಳಿಗೆ ಆಮಂತ್ರಣ ಇರುವುದಿಲ್ಲ.
‘ರಾಮ ದರ್ಬಾರ್‌ಅನ್ನು ಪ್ರಭು ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ರಾಜ ದರ್ಬಾರಿನಲ್ಲಿ ಇರುವ ಮಾದರಿಯಲ್ಲಿ ನಿರ್ಮಿಸಲಾ ಗಿದ್ದು, ಇದು ಪ್ರಾಣಪ್ರತಿಷ್ಠೆಯ 1 ವಾರದ ಬಳಿಕ ಸಾರ್ವಜನಿಕರಿಗೆ ತೆರೆವ ನಿರೀಕ್ಷೆಯಿದೆ. ಪಿಟಿಐ ಜತೆ ಮಾತನಾಡಿದ ಮಿಶ್ರಾ, ‘ಜೂ.5 ರಂದು ಅದ್ಧೂರಿಯಾಗಿ ರಾಮ ದರ್ಬಾರಿನ ಪ್ರಾಣಪ್ರತಿಷ್ಠೆ ನಡೆಯಲಿದ್ದು, ಅದರ ಕಾರ್ಯ ಕ್ರಮ ಜೂ.3ರಂದು ಆರಂಭವಾಗುತ್ತವೆ. ಸಂಕೀರ್ಣದ ಒಳಗಿರುವ 7 ದೇಗುಲ ಪ್ರತಿಷ್ಠಾಪನೆಯೂ ನಡೆಯಲಿದೆ’ ಎಂದರು

