ಅಯೋಧ್ಯೆ : ರಾಮ ಮಂದಿರದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ ಎಂಬ ಆರೋಪಕ್ಕೆ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಸ್ಪಷ್ಟನೆ ನೀಡಿದ್ದು, ‘ವಿದ್ಯುತ್ ಪೈಪ್ ಹಾಕಿದ್ದ ಬಿರುಕಿನಿಂದ ನೀರು ಬಂದಿದೆ ಹೊರತು, ಸೋರಿಕೆಯಿಂದಲ್ಲ’ ಎಂದು ಹೇಳಿದ್ದಾರೆ. ಈ ಕುರಿತು ಎರಡನೇ ದಿನವೂ ಸ್ಪಷ್ಟನೆ ನೀಡಿದ ಮಿಶ್ರಾ, ‘ಪೂರ್ತಿ ವ್ಯವಸ್ಥೆಯನ್ನು ನಾನೇ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ವಿದ್ಯುತ್ ಪೈಪ್ ಅಳವ ಡಿಸಲು ಹಾಕಿರುವ ಪೈಪ್ನಿಂದ ನೀರು ಬರುತ್ತಿದೆ, ಹೊರತು ಸೋರಿಕೆ ಯಿಂದಲ್ಲ ಈಗ ಎರಡನೇ ಅಂತಸ್ತಿನ ಮಾಳಿಗೆ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಎಲ್ಲವೂ ಸರಿಹೋಗುತ್ತದೆ’ ಎಂದಿದ್ದಾರೆ