Home » ಅಯೋಧ್ಯೆ ರಾಮನ ದರ್ಶನಕ್ಕೆ ಬೆಳಗ್ಗೆ 6.00 ರಿಂದಲೇ ಅವಕಾಶ
 

ಅಯೋಧ್ಯೆ ರಾಮನ ದರ್ಶನಕ್ಕೆ ಬೆಳಗ್ಗೆ 6.00 ರಿಂದಲೇ ಅವಕಾಶ

by Kundapur Xpress
Spread the love

ಅಯೋಧ್ಯ : ಅಯೋಧ್ಯೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಮತ್ತು ಧಾರ್ಮಿಕ ವಿಧಿವಿಧಾನಗಳ ಸಮಯವನ್ನು ಪ್ರಸ್ತುತ ಬೆಳಿಗ್ಗೆ 7.00 ರ ಬದಲಿಗೆ 6.00 ಗಂಟೆಯಿಂದಲೇ ಆರಂಭಿಸಲಾಗುವುದು ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮದಂತೆ ಬೆಳಿಗ್ಗೆ 6.00ರಿಂದ ರಾತ್ರಿ 10ರ ತನಕ ದೇಗುಲ ತೆರೆದಿರಲಿದೆ. ಕುಂಭಮೇಳ ಆರಂಭವಾದ ಬಳಿಕ ಅಯೋಧ್ಯೆಗೆ ಭಕ್ತರ ಆಗಮನ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ  ಕೈಗೊಳ್ಳಲಾಗಿದೆ.

 

Related Articles

error: Content is protected !!