Home » ಅಯ್ಯಪ್ಪ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ
 

ಅಯ್ಯಪ್ಪ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಪ್ರತಿನಿತ್ಯ 80,000 ಮಂದಿಗೆ ಅವಕಾಶ

by Kundapur Xpress
Spread the love

ತಿರುವನಂತಪುರಂ : ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಈ ವರ್ಷ ಯಾತ್ರಾರ್ಥಿಗಳಿಗೆ ಆನ್‌ಲೈನ್ ಬುಕ್ಕಿಂಗ್ ಮೂಲಕ ಮಾತ್ರ ಅವಕಾಶ ನೀಡಲಾಗುವುದು. ಅಂತೆಯೇ ದಿನಕ್ಕೆ ಗರಿಷ್ಠ 80,000 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕೇರಳ ಸರ್ಕಾರ ಶನಿವಾರ ಹೇಳಿದೆ. ಇನ್ನೊಂದು ತಿಂಗಳಲ್ಲಿ ಮಕರವಿಳಕ್ಕು ಸೀಸನ್ ಆರಂಭವಾಗಲಿದ್ದು, ವರ್ಚುವಲ್ ಕ್ಯೂ ಬುಕ್ಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಲು ಅವಕಾಶವನ್ನು ಒದಗಿಸಲಾಗುತ್ತದೆ.

ಹೀಗಾಗಿ ಯಾತ್ರಾರ್ಥಿಗಳು ಕಡಿಮೆ ಜನಸಂದಣಿ ಇರುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದೆ. ಮಕರವಿಳಕ್ಕು ಕಾಲದಲ್ಲಿ ಭಕ್ತರ ದಂಡು ಅಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

   

Related Articles

error: Content is protected !!