Home » 250 ಬಾಂಗ್ಲಾ ಪ್ರಜೆಗಳ ಗಡಿಪಾರು
 

250 ಬಾಂಗ್ಲಾ ಪ್ರಜೆಗಳ ಗಡಿಪಾರು

by Kundapur Xpress
Spread the love

ವಡೋದರಾ : ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ.

ಕೇಂದ್ರ ಸರ್ಕಾರದ ಸಹಕಾರದೊಂದಿಗೆ ವಾಯುಪಡೆ ವಿಶೇಷ ವಿಮಾನದ ಮೂಲಕ ವಡೋದರ ವಾಯುನೆಲೆಯಿಂದ ಬಾಂಗ್ಲಾ ವಲಸಿಗರ ಕೈಗಳಿಗೆ ಕೋಳ ಹಾಕಿ ಢಾಕಾದಲ್ಲಿ ಇಳಿಸಲಾಗಿದೆ.

ಕಳೆದ ತಿಂಗಳು ಅಹಮದಾಬಾದ್‌ನಲ್ಲಿ 1200 ಅಕ್ರಮ ಬಾಂಗ್ಲಾ ವಲಸಿಗರ ಮನೆಗಳನ್ನುಸರ್ಕಾರ ನೆಲೆಸಮ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಅಕ್ರಮ ವಲಸಿಗರನ್ನು ಇದೀಗ ಬಾಂಗ್ಲಾದೇಶಕ್ಕೆ ರವಾನಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಿದೆ.

 

Related Articles

error: Content is protected !!