Home » ಮಾ. 24,25ಕ್ಕೆ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
 

ಮಾ. 24,25ಕ್ಕೆ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ

by Kundapur Xpress
Spread the love

ಕೋಲ್ಕತ್ತ : ಪ್ರಮುಖ ಬೇಡಿಕೆಗಳ ಕುರಿತು ಭಾರತೀಯ ಬ್ಯಾಂಕುಗಳ ಸಂಘದೊಂದಿಗಿನ (ಐಬಿಎ) ಚರ್ಚೆಗಳು ಯಾವುದೇ ಸಕಾರಾತ್ಮಕ ಫಲಿತಾಂಶ ನೀಡದ ಕಾರಣ ಮಾರ್ಚ್ 24 ಮತ್ತು 25 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಬ್ಯಾಂಕ್ ಒಕ್ಕೂಟಗಳ ಯುನೈಟೆಡ್ ಫೋರಮ್ (ಯುಎಫ್ ಬಿಯು) ತಿಳಿಸಿದೆ. ಐಬಿಎ ಜತೆಗಿನ ಸಭೆಯಲ್ಲಿ, ಎಲ್ಲಾ ಯುಎಫ್ ಬಿಯು ಘಟಕಗಳು ನೇಮಕಾತಿ ಮತ್ತು ಐದು ದಿನಗಳ ಕೆಲಸದ ವಾರ ಸೇರಿ ಇತರೆ ಬೇಡಿಕೆಗಳನ್ನು ಇಟ್ಟವು. ಆದರೂ ಪ್ರಮುಖ ಸಮಸ್ಯೆಗಳು ಬಗೆ ಹರಿಯದೆ ಉಳಿದಿವೆ ಎಂದು ಎನ್‌ಸಿಬಿಇ ಪ್ರಧಾನ ಕಾರ್ಯದರ್ಶಿ ಹೇಳಿದರು.

 

Related Articles

error: Content is protected !!