61
ಬ್ಯಾಂಕಾಕ್ : ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮಕ್ಕಾಗಿ (ಬಿಮ್‌ಸ್ಪೆಕ್) ಸಾಮರ್ಥ್ಯ ವೃದ್ಧಿಗೆ ಭಾರತ ನೇತೃತ್ವದ ಹಲವಾರು ಉಪಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಬ್ಯಾಂಕಾಕ್‌ನಲ್ಲಿ ನಡೆದ 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪ್ರಧಾನಿ, ವಿಪತ್ತು ನಿರ್ವಹಣೆ, ಸುಸ್ಥಿರ ಸಮುದ್ರ ಸಾರಿಗೆ, ಸಾಂಪ್ರದಾಯಿಕ ಔಷಧ ಮತ್ತು ಕೃಷಿಯಲ್ಲಿ ಸಂಶೋಧನೆ ಮತ್ತು ತರಬೇತಿ ಕುರಿತು ಭಾರತದಲ್ಲಿ ಬಿಮ್‌ಸ್ಪೆಕ್ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು
ಇದೇ ವೇಳೆ ಯುವಕರನ್ನು ಕೌಶಲ್ಯರನ್ನಾಗಿಸಲು ಹೊಸ ಕಾರ್ಯಕ್ರಮವನ್ನು ಸಹ ಮೋದಿ ಘೋಷಿಸಿದರು. ಬೋಧಿ – ಮಾನವ ಸಂಪನ್ಮೂಲ ಮೂಲಸೌಕರ್ಯದ ಸಂಘಟಿತ ಅಭಿವೃದ್ಧಿಗಾಗಿ ಬಿಮ್‌ಸ್ಟಿಕ್ ಇದರಲ್ಲಿ ವೃತ್ತಿಪರರು, ವಿದ್ಯಾರ್ಥಿಗಳು, ಸಂಶೋಧಕರು, ರಾಜತಾಂತ್ರಿಕರು ಮತ್ತು ಇತರರಿಗೆ ತರಬೇತಿ ಮತ್ತು ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು ಎಂದು ತಿಳಿಸಿದರು

