Home » ಯುದ್ದದ ಬಳಿಕ ಬ್ರಹ್ಮೋಸ್‌ಗೆ ಭಾರೀ ಬೇಡಿಕೆ
 

ಯುದ್ದದ ಬಳಿಕ ಬ್ರಹ್ಮೋಸ್‌ಗೆ ಭಾರೀ ಬೇಡಿಕೆ

by Kundapur Xpress
Spread the love

ನವದೆಹಲಿ :  ಆಪರೇಷನ್ ಸಿಂದೂ‌ರ್ ಬಳಿಕ ದೇಶದ ಬ್ರಹ್ಮೋಸ್‌ ಕ್ಷಿಪಣಿ ಜನಪ್ರಿಯತೆ ಏರಿದ್ದು, 17 ದೇಶಗಳು ಖರೀದಿದಾರರ ಸಾಲಿನಲ್ಲಿವೆ. ಇದು ಮಾನವ ರಹಿತ ಸೂಪರ್‌ಸಾನಿಕ್‌ ಬ್ರಹ್ಮೋಸ್‌ ಕ್ಷಿಪಣಿಯಾಗಿದ್ದು, ಮ್ಯಾಕ್ 3ನಲ್ಲಿ ಹಾರುತ್ತದೆ. ಇದು 290 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಸುಧಾರಿತ ರೂಪಾಂತರದಲ್ಲಿ 500 ರಿಂದ 800 ಕಿ.ಮೀ.ವರೆಗೂ ಹೋಗಬಲ್ಲದು.

ಅಸಾಧಾರಣ ಶಸ್ತ್ರಾಸ್ತ್ರ

ಆಪರೇಷನ್ ಸಿಂದೂರ್‌ನಲ್ಲಿ ಬ್ರಹ್ಮೋಸ್‌ ಪ್ರಮುಖ ಪಾತ್ರ ವಹಿಸಿದೆ. ಇದು ಭಾರತದ ನಿಖರ ದಾಳಿ ಸಾಮರ್ಥ್ಯಗಳನ್ನು ಜಗತ್ತಿನ ಮುಂದೆ ತೋರಿಸಿತು. ಬ್ರಹ್ಮೋಸ್‌ ಕ್ಷಿಪಣಿ ಬಹುಮುಖ ಮತ್ತು ಅಸಾಧಾರಣ ಶಸ್ತ್ರಾಸ್ತ್ರವಾಗಿದ್ದು, ಭೂಮಿ, ವಾಯು ಮತ್ತು ಸಮುದ್ರದಿಂದ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂದ ಹಾಗೆ ಇದನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

 

Related Articles

error: Content is protected !!