Home » ಭಾರತದಿಂದ ಅಗ್ನಿ-5 : ಬಂಕರ್‌ ಬಸ್ಟರ್‌ ಕ್ಷಿಪಣಿ
 

ಭಾರತದಿಂದ ಅಗ್ನಿ-5 : ಬಂಕರ್‌ ಬಸ್ಟರ್‌ ಕ್ಷಿಪಣಿ

by Kundapur Xpress
Spread the love

ನವದೆಹಲಿ : ನೆಲದಾಳದಲ್ಲಿನ ಬಂಕರ್ ಗಳನ್ನೂ ಧ್ವಂಸ ಮಾಡಬಲ್ಲ ಅಮೆರಿಕದ ಬಂಕರ್ ಬಸ್ಟರ್ ಬಾಂಬ್, ಇತ್ತೀಚೆಗೆ ಇರಾನ್‌ನ ಭೂಗತ ಅಣು ನೆಲೆಗಳನ್ನೇ ನಾಶ ಮಾಡಿತ್ತು. ಈಗ ಇಂತದ್ದೇ ಬಾಂಬ್ ಅನ್ನು ಭಾರತ ಕೂಡ ಸಿದ್ದಪಡಿಸುತ್ತಿದೆ.

ಬಂಕರ್ ಬಸ್ಟರ್ ಬಾಂಬ್ ಗಳನ್ನು ಅಗ್ನಿ-5 ಖಂಡಾಂತರ ಕ್ಷಿಪಣಿ ಹೊತ್ತೊಯ್ಯುವಂತೆ ರೂಪಾಂತರಿಸಲಾಗುತ್ತಿದೆ. ಅದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)  ಅಗ್ನಿ-5ನ್ನು ಉನ್ನತೀಕರಿಸುತ್ತಿದೆ. ಪ್ರಸ್ತುತ ಸಿಡಿತಲೆಗಳನ್ನು ಹೊತ್ತು 5000 ಕೀ ಮೀ  ಕ್ರಮಿಸುವ ಸಾಮರ್ಥ್ಯವುಳ್ಳ ಇವುಗಳನ್ನು 7500 ಕೆ.ಜಿ. ಬಂಕರ್ ಬಸ್ಟರ್ ಗಳನ್ನು ಹೊತ್ತೊಯ್ಯುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇವು ನೆಲದಡಿ 80ರಿಂದ 100 ಮೀ. ನುಗ್ಗಿ ದಾಳಿ ಮಾಡಬಲ್ಲವು.

 

Related Articles

error: Content is protected !!