ಹೊಸದಿಲ್ಲಿ : ನಮ್ಮದೇ ವಿಮಾನ, ನಮ್ಮ ರಾಕೆಟ್ ಮತ್ತು ನಮ್ಮ ನೆಲದಿಂದ ಯಾರಾದರೂ ಅತಿ ಶೀಘ್ರ ಬಾಹ್ಯಾಕಾಶಕ್ಕೆ ಯಾನ ಮಾಡುವರೆಂಬುದು ತನ್ನ ಭರವಸೆಯಾಗಿದೆ. ಹೀಗೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವೀ ಯಾನ ನೆರವೇರಿಸಿ ಭೂಮಿಗೆ ಮರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದ್ದಾರೆ.
ಐಎಸ್‌ಎಸ್ ಮಿಷನ್‌ನಿಂದ ಲಭಿಸಿದ ಅನುಭವ ಯಾವುದೇ ತರಬೇತಿಗಿಂತ ಉತ್ತಮವೆಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಭಾರತವು ಇಂದಿಗೂ ಸಾರೆ ಜಹಾಂ ಸೆ ಅಚ್ಛಾ (ಇಡೀ ಜಗತ್ತಿಗಿಂತ ಶ್ರೇಷ್ಠ) ಎಂದು ಬಣ್ಣಿಸಿದರು.
ಭಾರತದ ಸ್ವಂತ ಗಗನಯಾನ ಮಿಷನ್‌ಗೆ ತುಂಬು ಪ್ರಯೋಜನಕಾರಿಯಾಗಲಿದೆ ಐಎಸ್‌ಎಸ್ ಮಿಷನ್. ಭಾಗವಾಗಿ ಕಳೆದ ವರ್ಷ ತಾನು ಬಹಳಷ್ಟು ಕಲಿತೆನೆಂದು ಶುಕ್ಲಾ ತಮ್ಮ ಆಕ್ಸಿಯಂ -4ಮಿಷನ್ ಅನುಭವವನ್ನು ವಿವರಿಸಿದರು.
ನೀವು ಎಷ್ಟು ತರಬೇತಿ ಪಡೆದಿರೆಂಬುದು ಮುಖ್ಯವಲ್ಲ. ತರಬೇತಿ ನಂತರ ರಾಕೆಟ್‌ನಲ್ಲಿ ಕುಳಿತುಕೊಳ್ಳುತ್ತಲೇ ಇಂಜಿನ್ ಗೆ ಬೆಂಕಿ ಹತ್ತಿಕೊಂಡಲ್ಲಿ ಅದನ್ನು ಎದುರಿಸುವುದು ತೀರಾ ವಿಭಿನ್ನ ಅನುಭವ. ತನಗೆ ಅಂತಹ ಅನುಭವದ ಕಲ್ಪನೆಯೇ ಇರಲಿಲ್ಲ. ತಾನು ಕೆಲವು ಸೆಕೆಂಡುಗಳ ಕಾಲ ರಾಕೆಟ್ ಹಿಂದೋಡುತ್ತಿದ್ದೆ. ಅದನ್ನು ಹಿಡಿಯಲು ತನಗೆ ಕೆಲ ಸಮಯ ಹಿಡಿಯಿತು. ಆ ಕ್ಷಣದಿಂದ ಬಾಹ್ಯಾಕಾಶ ನೌಕೆ ಕೆಳಗಿಳಿವವರೆಗೂ ಆಗುವ ಅನುಭವ ವರ್ಣನಾತೀತ ಎಂದರು.

