ನವದೆಹಲಿ : ಕೇಂದ್ರ ಬಜೆಟ್ನಲ್ಲಿ ಮಧ್ಯಮವರ್ಗಕ್ಕೆ ಬಂಪರ್ ಘೋಷಣೆ. ವಾರ್ಷಿಕ 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ. 12 ಲಕ್ಷ ರೂಪಾಯಿ ಮೀರಿದರೆ ಪೂರ್ತಿ ಆದಾಯಕ್ಕೂ ವಿವಿಧ ಸ್ಲ್ಯಾಬ್ ಗಳ ಅಡಿ ತೆರಿಗೆ, ತೆರಿಗೆ ಸ್ಲ್ಯಾಬ್ ಕೂಡ ಬದಲಾವಣೆ,
ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೆ ಮಾತ್ರ ಈ ಲಾಭ 12 ಲಕ್ಷ ರು. ಆದಾಯ ಗಳಿಸುತ್ತಿದ್ದವರು ಈವರೆಗೆ 30 ಸಾವಿರ ರು. ತೆರಿಗೆ ಕಟ್ಟಬೇಕಿತ್ತು. ಅದರಿಂದ ಈಗ ಮುಕ್ತಿ. 75 ಸಾವಿರ ರು. ಸ್ಟಾಂಡರ್ಡ್ ಡಿಡಕ್ಷನ್ ಫಲವಾಗಿ ಉದ್ಯೋಗ ವರ್ಗಕ್ಕೆ 12.75 ಲಕ್ಷ ರು.ವರಗೂ ತೆರಿಗೆ ವಿನಾಯಿತಿ. ಇದರಿಂದ 6.3 ಕೋಟಿ ಜನರಿಗೆ ಲಾಭ. 1 ಕೋಟಿ ಜನರು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಕ್ಕೆ ಹೋಗಿದ್ದು ಠೇವಣಿಯಿಂದ 50 ಸಾವಿರ ಬಡ್ಡಿ ಬಂದರೆ ಟಿಡಿಎಸ್ ಇಲ್ಲ