63
ಹೊಸದಿಲ್ಲಿ : ಭಾರತೀಯ ರಸ್ತೆ ಮೂಲಸೌಕರ್ಯಗಳು ಮುಂದಿನ ಎರಡು ವರ್ಷಗಳೊಳಗೆ ಅಮೆರಿಕವನ್ನು ಮೀರಿಸಲಿದೆ ಎಂಬುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರಕಾರವು ದೇಶದ ರಸ್ತೆಗಳು ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ಹೂಡಿರುವ ಹೂಡಿಕೆ ಕಳೆದೊಂದು ದಶಕದಲ್ಲಿ ಅಭೂತ ಪೂರ್ವವಾದುದಾಗಿದ್ದು, ವಿವಿಧ ರಸ್ತೆ-ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಉತ್ತಮ ಪ್ರಗತಿಯಲ್ಲಿವೆ ಎಂಬುದಾಗಿ ಅವರು ಹೇಳಿದ್ದಾರೆ.
ಕೆಲವು ಅಮೆರಿಕನ್ ಸಂದರ್ಶಕರು ಭಾರತದ ಮೂಲ ಸೌಕರ್ಯ ತಮ್ಮ ಮೂಲ ಸೌಕರ್ಯವನ್ನು ಮೀರಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಅಮೆರಿಕದ ಕೆಲವು ಜನರು ನನ್ನನ್ನು ಭೇಟಿ ಮಾಡಿ ನಮ್ಮ ಮೂಲಸೌಕರ್ಯ ಅಮೆರಿಕಕ್ಕಿಂತ ಉತ್ತಮವಾಗಿದೆ ಎಂದರು.

