73
ನಿಕೋಸಿಯಾ : ಸೈಪ್ರಸ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರವು ದೇಶದ ಅತ್ಯುನ್ನತ ಗೌರವವಾದ ‘ಗ್ರಾಂಡ್ ಕ್ರಾಸ್ ಆಫ್ ಆರ್ಡರ್ ಆಫ್ ಮಕಾರಿಯೋಸ್ II ಆಫ್ ಸೈಪ್ರಸ್’ ನೀಡಿ ಸೋಮವಾರ ಸನ್ಮಾನಿಸಿದೆ. ಇದು ಮೋದಿಗೆ ವಿದೇಶಗಳಲ್ಲಿ ದೊರೆತ 23ನೇ ಅತ್ಯುಚ್ಚ ಗೌರವವಾಗಿದೆ.
ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌ ಲೈಡ್ಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಗೌರವ ಸ್ವೀಕರಿಸಿ ಮಾತನಾಡಿದ ಮೋದಿ, ‘ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ವಿನಮ್ರನಾಗಿದ್ದೇನೆ. ಇದನ್ನು ನಾನು ಉಭಯ ದೇಶಗಳ ನಡುವಿನ ನಂಬಿಕಸ್ಥ ಸ್ನೇಹಕ್ಕೆ ಸಮರ್ಪಿಸುತ್ತೇನೆ. ಮುಂಬರುವ ಸಮಯದಲ್ಲಿ ನಮ್ಮ ಸಂಬಂಧಗಳು ಇನ್ನೂ ಎತ್ತರಕ್ಕೇರುತ್ತದೆ ಎಂಬ ನಂಬಿಕೆಯಿದೆ. ನಾವು ಒಟ್ಟಾಗಿ ಎರಡೂ ರಾಷ್ಟ್ರಗಳ ಪ್ರಗತಿ ಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಶಾಂತಿಯುತ ಮತ್ತು ಸುರಕ್ಷಿತ ಜಗತ್ತನ್ನು ನಿರ್ಮಿಸುವತ್ತ ಕೊಡುಗೆ ನೀಡುತ್ತೇವೆ ಎಂದರು.

