Home » ಬಿಜೆಪಿ : ಅಚ್ಚರಿಯ ದಿಲ್ಲಿ ಸಿಎಂ ಆಯ್ಕೆ
 

ಬಿಜೆಪಿ : ಅಚ್ಚರಿಯ ದಿಲ್ಲಿ ಸಿಎಂ ಆಯ್ಕೆ

by Kundapur Xpress
Spread the love

ನವದೆಹಲಿ : 27 ವರ್ಷಗಳ ನಂತರ ದಿಲ್ಲಿಯಲ್ಲಿ ಅಧಿಕಾರಕ್ಕೆ ಮರಳಿರುವ ಬಿಜೆಪಿ ಮತ್ತೆ ಅಚ್ಚರಿ ಸಿಎಂ ಅನ್ನು ಆಯ್ಕೆ ಮಾಡಿದೆ ದಿಲ್ಲಿ ವಿಧಾನಸಭೆಗೆ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿರುವ ರೇಖಾ ಗುಪ್ತಾ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಬುಧವಾರ ಘೋಷಿಸಿದೆ

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ದೆಹಲಿ ವಿಧಾನಸಭೆಯ ಬಿಜೆಪಿ ಶಾಸಕಾಂಗ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ವೀಕ್ಷಕರಾದ ರವಿಶಂಕರ್‌ಪ್ರಸಾದ್ ಮತ್ತು ಒ.ಪಿ. ಧನಕರ್ ಅವರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 48 ಬಿಜೆಪಿ ಶಾಸಕರು ಭಾಗವಹಿಸಿದ್ದರು.

ಶಾಲಿಮಾರ್‌ಬಾಗ್ ಶಾಸಕಿ ಆಗಿರುವ ಗುಪ್ತಾ ಮತ್ತು ಅವರ ಸಂಪುಟ ಸಚಿವರು ಇಂದು ಗುರುವಾರ ಬೆಳಗ್ಗೆ 11.00 ಗಂಟೆಗೆ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅವರ ಜತೆ ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ ಸೇರಿ 6 ಸಚಿವರ ಪ್ರಮಾಣ ಸ್ವೀಕಾರ ನಿರೀಕ್ಷೆಯಿದೆ.

 

Related Articles

error: Content is protected !!