ಹೊಸದಿಲ್ಲಿ: ಡೊಮಿನಿಕಾ ಸರ್ಕಾರವು ತನ್ನ ಅತ್ಯುನ್ನತ ಪುರಸ್ಕಾರವಾದ ‘ಡೊಮಿನಿಕಾ ಅವಾರ್ಡ್ ಆಫ್ ಹಾನರ್’ನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವುದಾಗಿ ಪ್ರಕಟಿಸಿದ್ದು ಇದೇ ತಿಂಗಳು ಪ್ರದಾನ ಮಾಡಲಿದೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಡೊಮಿನಿಕಾಗೆ ಪ್ರಧಾನಿ ಮೋದಿಯವರ ಕೊಡುಗೆ ಮತ್ತು ಉಭಯ ರಾಷ್ಟ್ರಗಳ ನಡುವಣ ಪಾಲುದಾರಿಕೆ ಬಲಪಡಿಸುವಲ್ಲಿ ಮೆರೆದ ಸಮರ್ಪಣಾ ಭಾವ ಪರಿಗಣಿಸಿ ನಮೋ ಅವರಿಗೆ ಪ್ರಸ್ತುತ ಗೌರವವನ್ನು ಪ್ರದಾನಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.