Home » ದೆಹಲಿಯಲ್ಲಿ ಸತತ 2ನೇ ದಿನವೂ ಭೂಕಂಪ : ಯಾವುದೇ ಹಾನಿಯಿಲ್ಲ
 

ದೆಹಲಿಯಲ್ಲಿ ಸತತ 2ನೇ ದಿನವೂ ಭೂಕಂಪ : ಯಾವುದೇ ಹಾನಿಯಿಲ್ಲ

by Kundapur Xpress
Spread the love

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ 2ನೇ ದಿನ ಭೂಮಿ ಕಂಪಿಸಿದೆ. ಗುರುವಾರವಷ್ಟೇ 4.4 ತೀವ್ರತೆಗೆ ನಲುಗಿದ್ದ ರಾಜಧಾನಿಯಲ್ಲಿ ಶುಕ್ರ ವಾರವೂ 3.7 ತೀವ್ರತೆಯ ಭೂಕಂಪವಾಗಿದೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.

ಶುಕ್ರವಾರ ಸಂಜೆ 7:49ರ ವೇಳೆಗೆ ದೆಹಲಿ ಸಮೀಪ ಹರ್ಯಾಣದ ಝಜ್ಜರ್ ಎಂಬಲ್ಲಿ ಭೂಮಿ ಕಂಪಿಸಿದೆ. ಇದರಿಂದಾಗಿ ಆತಂಕಕ್ಕೊಳಗಾದ ಜನರು ಕೆಲ ಕಾಲ ಮನೆಯಿಂದ ಹೊರಬಂದರು. ಗುರುವಾರವೂ ಇದೇ ಪ್ರದೇಶ ಕೇಂದ್ರಿತವಾಗಿ 4.4 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಸತತ 2ನೇ ದಿನದ ಭೂಕಂಪದಿಂದಾಗಿ ದೆಹಲಿ ಸುತ್ತಮುತ್ತಲಿನ ಜನ ಆತಂಕಕ್ಕೊಳಗಾಗಿದ್ದಾರೆ.

 

Related Articles

error: Content is protected !!