163
ಮುಂಬೈ : ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮುಗಿಯುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟ ಆಗಿವೆ. ಮಹಾರಾಷ್ಟ್ರದಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ (ಮಹಾಯುತಿ) ಕೂಟ ಪುನಃ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.
ಆದರೆ ಜಾರ್ಖಂಡ್‌ನಲ್ಲಿ ಮಿಶ್ರ ಫಲಿತಾಂಶ ಬರುವ ಸಮೀಕ್ಷೆಗಳು ಪ್ರಕಟವಾಗಿದ್ದು ಸಮಬಲದ ಭವಿಷ್ಯ ನುಡಿದಿವೆ ಹೀಗಾಗಿ ನ.23ರಂದು ನಡೆಯಲಿರುವ ಮತಎಣಿಕೆ ಸಹಜವಾಗಿಯೇ ಕುತೂಹಲ ಕೆರಳುವಂತೆ ಮಾಡಿದೆ. ಆದರೆ ಲೋಕಸಭೆ ಚುನಾವಣೆ ಮತ್ತು ಹರ್ಯಾಣ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್‌ಗಳು ತಲೆಕೆಳಗಾಗಿದ್ದವು ಎಂಬುದು ಇಲ್ಲಿ ಗಮನಾರ್ಹ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿ ಸಿದಂತೆ ಮಾಧ್ಯಮ ಸಂಸ್ಥೆಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ಸಮೀಕ್ಷೆ ಪ್ರಕಟಿಸಿವೆ. ಆಡಳಿತಾರೂಢ ಮಹಾಯುತಿ (ಬಿಜೆಪಿ-ಶಿವಸೇನೆ ಶಿಂಧೆ ಬಣ ‘ಎನ್ಸಿಪಿ ಅಜಿತ್ ಬಣ) ಹಾಗೂ ‘ಎಂಎಎ’ ಎಂದು ಕರೆ ಯಲಾಗುವ ಮಹಾ ವಿಕಾಸ ಅಘಾಡಿ (ಕಾಂಗ್ರೆಸ್- ಶಿವಸೇನೆ ಠಾಕ್ರೆ ಬಣ-ಎನ್‌ಸಿಪಿ ಶರದ್ ಬಣ) ಇಲ್ಲಿ ಪ್ರಮುಖ ಎದುರಾಳಿಗಳು

