82
ನವದೆಹಲಿ: ಭಾರತದ ಇತಿಹಾಸದ ಕರಾಳ ಅಧ್ಯಾಯ ಹಾಗೂ ಕಾಂಗ್ರೆಸ್ ಪಾಲಿನ ಕಪ್ಪುಚುಕ್ಕಿ ಎಂದೇ ಪರಿಗಣಿಸಲಾಗುವ ತುರ್ತುಸ್ಥಿತಿ ಹೇರಿಕೆಯಾಗಿ ಇಂದು ಬುಧವಾರಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆ ಯಲ್ಲಿ ದೇಶವ್ಯಾಪಿ ‘ಸಂವಿಧಾನ ಹತ್ಯಾ ದಿವಸ’ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಜೊತೆಗೆ 1 ವರ್ಷವಿಡೀ ತುರ್ತು ಸ್ಥಿತಿಯಲ್ಲಾದ ಪ್ರಜಾಪ್ರಭುತ್ವ ನಾಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಗೂ ಮುಂದಾಗಿದೆ.
1975ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತಿದ್ದಂತೆ, ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ದೇಶಾದ್ಯಂತ ತುರ್ತುಸ್ಥಿತಿ ಹೇರಿದ್ದರು. 1977ರಲ್ಲಿ ಜನತಾಪಕ್ಷ ಅಭೂತಪೂರ್ವ ಜಯ ಸಾಧಿಸುವುದರೊಂದಿಗೆ ತುರ್ತು ಸ್ಥಿತಿಯನ್ನು ತೆರವುಗೊಳಿಸಲಾಗಿತ್ತು. ಆನಂತರದ ವರ್ಷಗಳಲ್ಲಿ ಬಿಜೆಪಿ ಪಾಲಿಗೆ ತುರ್ತಿಸ್ಥಿತಿ ವಿಷಯವು ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತವಾಗಿದೆ.

