Home » ಬಾಂಗ್ಲಾ ತರಬೇತಿ ವಿಮಾನ ಶಾಲೆಗೆ ಡಿಕ್ಕಿ : 19 ಸಾವು
 

ಬಾಂಗ್ಲಾ ತರಬೇತಿ ವಿಮಾನ ಶಾಲೆಗೆ ಡಿಕ್ಕಿ : 19 ಸಾವು

by Kundapur Xpress
Spread the love

ಢಾಕಾ : ಬಾಂಗ್ಲಾದೇಶ ವಾಯುಪಡೆಯ ಚೀನಾ ನಿರ್ಮಿತ ಎಫ್-7 ಬಿಜಿಐ ತರಬೇತಿ ಜೆಟ್ ಸೋಮವಾರ ಮಧ್ಯಾಹ್ನ ಢಾಕಾದ ಉತ್ತರದಲ್ಲಿರುವ ಮೈಲ್ಲೊನ್ ಶಾಲೆ ಮತ್ತು ಕಾಲೇಜಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 19 ಜನರು ಮೃತಪಟ್ಟಿದ್ದು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳಾಂತರಿಸಲು ಅಂಬ್ಯುಲೆನ್ಸ್‌ಗಳ ಕೊರತೆಯಿಂದ ರಿಕ್ಷಾ, ವ್ಯಾನ್‌ಗಳನ್ನು ಬಳಸಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದ ದೃಶ್ಯ ಕಂಡುಬಂತು. ಸಾವಿಗೀಡಾದವರಲ್ಲಿ ಚಿಕ್ಕ ಮಕ್ಕಳೂ ಸೇರಿದ್ದಾರೆ.

ಕನಿಷ್ಠ 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಬರ್ನ್ ಅಂಡ್ ಪ್ಲಾಸ್ಟಿಕ್ ಸರ್ಜರಿ ಸೇರಿ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸಿವೆ.

ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ಸಂಪೂರ್ಣ ತನಿಖೆ ಮತ್ತು ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವಿನ ಭರವಸೆ ನೀಡಿದ್ದಾರೆ. ಪದಚ್ಯುತ ಪ್ರಧಾನ ಮಂತ್ರಿ ಶೇಖ್ ಹಸೀನಾ, ರಕ್ಷಣಾ ಮತ್ತು ಪುನರ್ವಸತಿ ಪ್ರಯತ್ನಗಳ ಬೆಂಬಲಕ್ಕೆ ಒತ್ತಾಯಿಸಿದ್ದಾರೆ.

 

Related Articles

error: Content is protected !!