Home » ಮೋದಿ ಮನಸ್ಸಲ್ಲೇನಿದೆ ಎಂಬುದನ್ನು ಪತ್ತೆ ಮಾಡಲು ಆಗಲ್ಲ
 

ಮೋದಿ ಮನಸ್ಸಲ್ಲೇನಿದೆ ಎಂಬುದನ್ನು ಪತ್ತೆ ಮಾಡಲು ಆಗಲ್ಲ

: ದೇವೇಗೌಡ

by Kundapur Xpress
Spread the love

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಪತ್ತೆ ಹಚ್ಚಲು ಆಗಲ್ಲ, ಕೊನೆಯ ಗಳಿಗೆಯ ತನಕವೂ ಅವರು ಗುಟ್ಟು ಬಿಟ್ಟು ಕೊಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಅವರು ದೆಹಲಿಯ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಬೆಂಬಲ ಕೋರಿದರು. ಆ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡರು, ‘ಮೋದಿ ಅವರೊಂದಿಗಿನ ನನ್ನ 10 ವರ್ಷದ ಅನುಭವದಿಂದ ಹೇಳುತ್ತಿದ್ದೇನೆ. ಮೋದಿ ಅವರ ಮನಸ್ಸಲ್ಲಿ ಏನಿದೆ ಎಂಬುದನ್ನು ಯಾರೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕೊನೆಯ ಕ್ಷಣದ ತನಕವೂ ಯಾರಿಗೂ ತಿಳಿಯುವುದಿಲ್ಲ ಎಂದರು.

 

Related Articles

error: Content is protected !!